ADVERTISEMENT

ಗಾಂಜಾ ಸಾಗಣೆ: ಭಾರತೀಯನ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 7:52 IST
Last Updated 30 ಜೂನ್ 2020, 7:52 IST
ಬಂಧನ–ಪ್ರಾತಿನಿಧಿಕ ಚಿತ್ರ
ಬಂಧನ–ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‍: ಗಾಂಜಾ ಸಾಗಣೆ ಆರೋಪದ ಮೇಲೆ ಭಾರತೀಯನೊಬ್ಬನನ್ನು ಇಲ್ಲಿನ ಅಧಿಕಾರಿಗಳು ಬಂಧಿಸಿದ್ದಾರೆ. ಅಂದಾಜು ₹150 ಕೋಟಿ ಮೌಲ್ಯದ 1000 ಕೆ.ಜಿಯಷ್ಟು ಗಾಂಜಾವನ್ನು ಲಾರಿಯಲ್ಲಿ ಕೆನಡಾದಿಂದ ಅಮೆರಿಕಕ್ಕೆ ಸಾಗಿಸುತ್ತಿದ್ದ ಆರೋಪದಡಿ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

15 ದಿನಗಳಲ್ಲಿ ಅಮೆರಿಕದಲ್ಲಿ ಹೀಗೆ ಬಂಧನಕ್ಕೆ ಒಳಗಾದ ಮೂರನೇ ಭಾರತೀಯ ಈತ. ಈ ಅಪರಾಧಕ್ಕೆ ಕನಿಷ್ಠ 10 ವರ್ಷ ಸೆರೆವಾಸ ಅಥವಾ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಕೆನಡಾದ ಒಂಟಾರಿಯೊದ ನೋಂದಣಿ ಸಂಖ್ಯೆ ಹೊಂದಿದ್ದ ಲಾರಿ ಚಾಲನೆ ಮಾಡುತ್ತಿದ್ದಪ್ರಬ್ಜೋತ್‌ ನಾಗ್ರಾ (26) ಅಮೆರಿಕವನ್ನು ಪೀಸ್‍ ಬ್ರಿಡ್ಜ್ ಸೇತುವೆ ಮೂಲಕ ಪ್ರವೇಶಿಸಲು ಯತ್ನಿಸಿದ್ದ. ಅದರಲ್ಲಿ ಗಾಂಜಾ ಇದ್ದದ್ದು ಪತ್ತೆಯಾಯಿತು. ಕೂಡಲೇ ಆತನನ್ನು ಮತ್ತು ಲಾರಿಯಲ್ಲಿದ್ದ ಗಾಂಜಾವನ್ನು ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.