ಲಂಡನ್: ಭಯೋತ್ಪಾದನೆ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿರುವ ಆರೋಪದಡಿ ಭಾರತೀಯ ಪ್ರಜೆಯೊಬ್ಬನನ್ನು ಇಲ್ಲಿನ ಪೊಲೀಸರು, ಗುರುವಾರ ವೆಸ್ಟ್ ಲಂಡನ್‌ನ ಹೇಯ್ಸ್‌ನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೂಲತಃ ತಮಿಳುನಾಡಿನ ಮದುರೈನವನಾಗಿದ್ದು, ಬ್ರಿಟನ್ ಮತ್ತು ಬೆಲ್ಜಿಯಂನ ವಿಳಾಸ ಹೊಂದಿದ್ದ. ಈತನ ವಿರುದ್ಧ ಅಮೆರಿಕದ ತನಿಖಾ ಸಂಸ್ಥೆ ಬಂಧನ ವಾರಂಟ್ ಅನ್ನು ನೀಡಿತ್ತು. 65 ವರ್ಷದ ಸುಂದರ್ ನಾಗರಾಜನ್ ಬಂಧಿತ ಆರೋಪಿ. ಈತನನ್ನು ನಾಗರಾಜನ್ ಸುಂದರ್ ಪೂಂಗುಲಾಮ್ ಕಾಶಿವಿಶ್ವನಾಥನ್ ಮತ್ತು ನಾಗಸುಂದರ್ ಪೂಂಗುಲಾಮ್ ಕೆ.ನಾಗರಾಜನ್ ಹೆಸರಿನಿಂದಲೂ ಗುರುತಿಸಲಾಗುತ್ತಿತ್ತು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈತನ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಲಂಡನ್‌ನ ವೆಸ್ಟ್‌ಮಿನಿಸ್ಟರ್ ಕೋರ್ಟ್‌ಗೆ ಮುಂದಿನ ವಾರ ಹಾಜರಾಗಬೇಕಿತ್ತು. ಈತನಿಗೆ ಭಯೋತ್ಪಾದಕರಿಗೆ ಹಣ ನೆರವು ಆರೋಪವುಳ್ಳ ವಜ್ರದ ವ್ಯಾಪಾರಿ, ನಜೀಮ್ ಅಹ್ಮದ್ ಜೊತೆಗೆ ಸಂಪರ್ಕವಿದೆ ಎಂದು ಶಂಕಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.