ADVERTISEMENT

ದುಬೈನಲ್ಲಿ ಕೋವಿಡ್: ಕಾನ್ಸುಲೇಟ್‌ ಕಚೇರಿಗೆ ಭೇಟಿ ನೀಡದಂತೆ ಭಾರತೀಯರಿಗೆ ಸಲಹೆ

ಪಿಟಿಐ
Published 12 ಫೆಬ್ರುವರಿ 2021, 7:33 IST
Last Updated 12 ಫೆಬ್ರುವರಿ 2021, 7:33 IST
ದುಬೈ- ಸಾಂದರ್ಭಿಕ ಚಿತ್ರ
ದುಬೈ- ಸಾಂದರ್ಭಿಕ ಚಿತ್ರ   

ದುಬೈ: ನಗರದಲ್ಲಿ ಕೋವಿಡ್‌ 19ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕಾನ್ಸುಲೇಟ್‌ ಕಚೇರಿಗೆ ಭೇಟಿ ನೀಡದಂತೆ, ಇಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಲಾಗಿದೆ.

ಅನಿವಾರ್ಯ ಅಥವಾ ಅಗತ್ಯವಿಲ್ಲದಿದ್ದರೆ, ವಿವಿಧ ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್‌ ವೇದಿಕೆಗಳ ಮೂಲಕ ಕಾನ್ಸುಲೇಟ್‌ ಕಚೇರಿ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ ದುಬೈನಲ್ಲಿ ಕೋವಿಡ್‌ 19 ಪ್ರಕರಣಗಳು ಏರಿಕೆಯಾಗುತ್ತಿದ್ದು ರಜಾದಿನಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವ್ಯಾಪಾರ ವಹಿವಾಟು ಪುನರಾರಂಭ ಮತ್ತು ಕರ್ಫ್ಯೂ ಸಡಿಲಿಸುವುದಕ್ಕೂ ಜಾಗತಿಕವಾಗಿ ಟೀಕೆ ವ್ಯಕ್ತವಾಗಿದೆ.

ADVERTISEMENT

ಹಾಗಾಗಿ ಯಾವುದೇ ಸೇವೆಗಳಿಗಾಗಿ ಕಾನ್ಸುಲೇಟ್ ಕಚೇರಿಗಳನ್ನು ಸಂಪರ್ಕಿಸಲು ಬಯಸುವ ಭಾರತೀಯರು, ವಿವಿಧ ಎಲೆಕ್ಟ್ರಾನಿಕ್ ವೇದಿಕೆಗಳನ್ನು ಬಳಸುವಂತೆ‘ ಭಾರತೀಯ ರಾಯಭಾರ ಕಚೇರಿ ಟ್ವಿಟರ್‌ ಮೂಲಕ ಮನವಿ ಮಾಡಿದೆ.

ದುಬೈನಲ್ಲಿರುವ ಕಾನ್ಸುಲೇಟ್‌ ಕಚೇರಿ, ದುಬೈ, ಶಾರ್ಜಾ ಸೇರಿದಂತೆ ಅರಬ್‌ ರಾಷ್ಟ್ರದ ಆರು ಪ್ರದೇಶಗಳಲ್ಲಿ ನೆಲೆಸಿರುವ 26 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಸೇವೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.