ADVERTISEMENT

ಅಮೆರಿಕ: ಕೌಂಟಿ ಕಮಿಷನರ್‌ ಹುದ್ದೆಗೆ ಭಾರತ ಮೂಲದ ನೀಲ್‌ ಮಖಿಜಾ ಸ್ಪರ್ಧೆ

ಪಿಟಿಐ
Published 20 ಮಾರ್ಚ್ 2023, 11:17 IST
Last Updated 20 ಮಾರ್ಚ್ 2023, 11:17 IST
ನೀಲ್‌ ಮಖಿಜಾ ಟ್ವಿಟರ್ ಚಿತ್ರ
ನೀಲ್‌ ಮಖಿಜಾ ಟ್ವಿಟರ್ ಚಿತ್ರ   

ನ್ಯೂಯಾರ್ಕ್‌: ಭಾರತ ಮೂಲದ ವಕೀಲ ಮತ್ತು ಶಿಕ್ಷಣ ತಜ್ಞ ನೀಲ್‌ ಮಖಿಜಾ (36) ಅವರು ಅಮೆರಿಕದ ಅಲಬಾಮಾ ರಾಜ್ಯದ ಕೌಂಟಿ ಕಮಿಷನರ್‌ ಹುದ್ದೆಗೆ ಸ್ಪರ್ಧಿಸಲಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ನೀಲ್‌ ಅವರು ಡೆಮಾಕ್ರಟಿಕ್‌ ಪಕ್ಷದ ಸದಸ್ಯರಾಗಿದ್ದು ನಾಗರಿಕ ಹಕ್ಕುಗಳ ವಕೀಲರಾಗಿದ್ದಾರೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದಾರೆ. ಅಲಬಾಮಾ ಮಾಂಟ್‌ಗೊಮೆರಿಯ ನಗರದ ಕೌಂಟಿ ಬೋರ್ಡ್ ಆಫ್ ಕಮಿಷನರ್‌ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಕಳೆದ ವಾರ ದಿ ಫಿಲಡೆಲ್ಫಿಯಾ ಎನ್ಕ್ವೈರರ್ ಪತ್ರಿಕೆ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT