ADVERTISEMENT

ವಂಚನೆ: ಭಾರತ ಮೂಲದ ವ್ಯಕ್ತಿಗೆ ಜೈಲು

ಪಿಟಿಐ
Published 22 ಜುಲೈ 2022, 15:21 IST
Last Updated 22 ಜುಲೈ 2022, 15:21 IST

ನ್ಯೂಯಾರ್ಕ್‌:ಭಾರತ ಮೂಲದ 27 ವರ್ಷದ ಗೌರವ್‌ಜಿತ್‌ ರಾಜ್‌ ಸಿಂಗ್‌ ಎಂಬಾತನಿಗೆ ವಂಚನೆ ಪ್ರಕರಣದಲ್ಲಿ ಅಮೆರಿಕದ ಜಿಲ್ಲಾ ನ್ಯಾಯಾಲಯವು ಗುರುವಾರ ನಾಲ್ಕು ವರ್ಷಗಳ ಜೈಲುವಾಸದ ಸಜೆ ನೀಡಿದೆ. ಪಿಪಿಇ ಕಿಟ್‌ ನೀಡುವುದಾಗಿ ನಂಬಿಸಿ, ವಂಚಿಸಿದ ಆರೋಪ ಸೇರಿದಂತೆ ವಿವಿಧ ವಂಚನೆ ಪ್ರಕರಣಗಳು ಅವರ ವಿರುದ್ಧ ದಾಖಲಾಗಿದ್ದವು.

ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದ 2020ರ ಮೇನಲ್ಲಿ, 15 ಲಕ್ಷ ಪಿಪಿಇ ಕಿಟ್‌ಗಳನ್ನು₹16 ಕೋಟಿಗೆ ಪೂರೈಸುವುದಾಗಿ ಸಿಂಗ್‌ ಹಲವರಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಇವರಲ್ಲಿ 10 ಮಂದಿಯಿಂದ ಮುಂಗಡವಾಗಿ ₹71 ಲಕ್ಷವನ್ನೂ ಸಿಂಗ್‌ ಪಡೆದುಕೊಂಡಿದ್ದರು.

ಹಣ ಪಾವತಿಯಾದ ನಂತರ ಕಿಟ್‌ ತಲುಪದಿದ್ದರ ಕುರಿತು ಹಲವರು ವಿಚಾರಿಸಿದ್ದಾರೆ. ಕಿಟ್ ತಲುಪದಿದ್ದಕ್ಕೆ ಹಲವಾರು ಕಾರಣಗಳನ್ನು ಸಿಂಗ್‌ ಹೇಳಿದ್ದಾರೆ. ನಂತರ ವಂಚನೆಗೆ ಒಳಗಾದವರು ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.