ADVERTISEMENT

ಚಾಲಕನ ನಿಂದನೆ; ಭಾರತೀಯ ಮೂಲದ ವ್ಯಕ್ತಿಗೆ ಜೈಲು ಶಿಕ್ಷೆ

ಪಿಟಿಐ
Published 27 ಆಗಸ್ಟ್ 2021, 5:48 IST
Last Updated 27 ಆಗಸ್ಟ್ 2021, 5:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಿಂಗಪುರ: ಚೀನಾ ಮೂಲದ ಟ್ಯಾಕ್ಸಿ ಚಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿ, ಜನಾಂಗೀಯ ನಿಂದನೆ ಮಾಡಿದ ಆರೋಪಕ್ಕಾಗಿ ಭಾರತೀಯ ಮೂಲದ ಸಿಂಗಪುರದ ವ್ಯಕ್ತಿಗೆ ಹದಿನೇಳು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಸಹಾಯನಾಥನ್‌ ಆಂಥೊನಿ (48) ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ತಾನು ಮದ್ಯಪಾನ ಮಾಡಿ ಸಾರ್ವಜನಿಕವಾಗಿ ಚಾಲಕ ಟಾನ್‌ ಟೇಕ್‌ ಹಾಕ್‌ನನ್ನು ನಿಂದಿಸಿದ್ದಾಗಿ ಒಪ್ಪಿಕೊಂಡಿರುವುದಾಗಿ ‘ದಿ ಸ್ಟ್ರೇಟ್ಸ್‌ ಟೈಮ್ಸ್‌’ ವರದಿ ಮಾಡಿದೆ.

ಆಂಥೊನಿ ಎರಡು ಬಾರಿ ಚಾಲಕನಿಗೆ ಕಿರುಕುಳ ನೀಡಿದ್ದು ಸಾಬೀತಾಗಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯ ಎರಡು ವಾರ ಮತ್ತು ಮೂರು ದಿನಗಳ ಜೈಲು ಶಿಕ್ಷೆ ವಿಧಿಸಿದೆ.

ADVERTISEMENT

ಕಳೆದ ಅಕ್ಟೋಬರ್ 30ರಂದು ಸಹಾಯನಾಥನ್ ಅವರು ತನ್ನ ಪತ್ನಿಯೊಂದಿಗೆ ಟ್ಯಾಕ್ಸಿಯಲ್ಲಿ ಮಾಲ್‌ಗೆ ಹೋಗುವ ವೇಳೆ, ಚಾಲಕನಿಗೆ ಹತ್ತಿರದ ಮಾರ್ಗದಲ್ಲಿ ಕರೆದೊಯ್ಯುವಂತೆ ತಿಳಿಸಿದ್ದರು. ಇದಕ್ಕೆ ಸ್ಪಂದಿಸದಿದ್ದಾಗ ಚಾಲಕನನ್ನು ಅಸಭ್ಯ ಪದಗಳಿಂದ ನಿಂದಿಸಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ, ಶಿಕ್ಷೆಯಲ್ಲಿ ಕೊನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.