ADVERTISEMENT

ಕಾಳಸಂತೆಯಲ್ಲಿ ಔಷಧ ಮಾರಾಟ: ಭಾರತೀಯ ಮೂಲದ ವ್ಯಾಪಾರಿಗೆ ಜೈಲು

ಪಿಟಿಐ
Published 3 ಮಾರ್ಚ್ 2021, 6:48 IST
Last Updated 3 ಮಾರ್ಚ್ 2021, 6:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌:ಕಾಳಸಂತೆಯಲ್ಲಿಔಷಧವನ್ನು ಮಾರಾಟ ಮಾಡಿದಕ್ಕಾಗಿ ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ ಔಷಧ ವ್ಯಾಪಾರಿಗೆ ಇಲ್ಲಿನ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

‌ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಬರ್ಮಿಂಗ್‌ಹ್ಯಾಮ್ ಕ್ರೌನ್ ನ್ಯಾಯಾಲಯ, ಆರೋಪಿ ಬಾಲ್‌ಕೀತ್‌ ಸಿಂಗ್‌ ಖೈರಾ (36) ಜೈಲು ಶಿಕ್ಷೆ ವಿಧಿಸಿದೆ.

ಬಾಲ್‌ಕೀತ್‌ ಸಿಂಗ್‌, ಇಲ್ಲಿನ ವೆಸ್ಟ್‌ಬ್ರೋಮ್‌ವಿಚ್‌ನ ಹೈ ಸ್ಟ್ರೀಟ್‌ನಲ್ಲಿರುವ ತನ್ನ ತಾಯಿಯ ಖೈರಾ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ನಿಷೇಧಿತ ವ್ಯಸನಕ್ಕೊಳಗಾಗುವ ಔಷಧಗಳನ್ನು ಪ್ರಿಸ್ಕ್ರಿಪ್ಷನ್‌ನೊಂದಿಗೆ ಮಾರಾಟ ಮಾಡುತ್ತಿದ್ದ. ಈ ಔಷಧಗಳ ಮಾರಾಟದಿಂದ 2016 ಮತ್ತು 2017ರಲ್ಲಿ ಹೆಚ್ಚು ಲಾಭಗಳಿಸಿದ್ದ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

‌‘ನಿಯಂತ್ರಣ ಪ್ರಾಧಿಕಾರದ ಅನುಮತಿ ಪಡೆಯದೇ ಹಾಗೂ ಪರವಾನಗಿ ರಹಿತ ಅಥವಾ ಪ್ರಿಸ್ಕ್ರಿಪ್ಷನ್‌ನೊಂದಿಗೆ ಔಷಧಗಳನ್ನು ಮಾರಾಟ ಮಾಡುವುದು ಗಂಭೀರ ಅಪರಾಧ‘ ಎಂದು ಪ್ರಕರಣದ ನೇತೃತ್ವ ವಹಿಸಿದ್ದ ಯುಕೆ ಮೆಡಿಸಿನ್ಸ್‌ ಮತ್ತು ಹೆಲ್ತ್‌ಕೇರ್‌ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರದ ಎನ್‌ಫೋರ್ಸ್‌ಮೆಂಟ್‌ ಅಧಿಕಾರಿ ಗ್ರಾಂಟ್ ಪೂವೆಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.