ADVERTISEMENT

US Presidential Election: ಅರಿಜೋನಾದಿಂದ ಭಾರತೀಯ ಮೂಲದ ಅಮಿಶ್‌ ಶಾ ಸ್ಪರ್ಧೆ

ಪಿಟಿಐ
Published 2 ಆಗಸ್ಟ್ 2024, 14:09 IST
Last Updated 2 ಆಗಸ್ಟ್ 2024, 14:09 IST
.
.   

ವಾಷಿಂಗ್ಟನ್: ಭಾರತೀಯ ಮೂಲದ ವೈದ್ಯ ಅಮಿಶ್‌ ಶಾ ಅವರು ಡೆಮಾಕ್ರಟಿಕ್‌ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಗೆದ್ದು, ಅಮೆರಿಕದ ಅರಿಜೋನಾ  ಜಿಲ್ಲೆಯಿಂದ ಮುಖ್ಯ ಚುನಾವಣೆಗೆ ಸ್ಪರ್ಧಿಸುವ ಟಿಕೆಟ್‌ ಪಡೆದಿದ್ದಾರೆ. ಈ ಮೂಲಕ ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗೆ ಪ್ರಬಲ ಸವಾಲೊಡ್ಡಲು ಸಿದ್ಧರಾಗಿದ್ದಾರೆ.

ಶಾ ಅವರು 1,629 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.

ಸ್ಥಳೀಯ ಸುದ್ದಿವಾಚಕ ಆ್ಯಂಡ್ರಿ ಚೆರ್ನಿ, ಆ್ಯಂಡ್ರೀವ್‌ ಹಾರ್ನೆ ಮತ್ತಿತರರನ್ನು ಶಾ ಮಣಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.