ADVERTISEMENT

ಅಮೆರಿಕ: ವಿಮಾನ ದುರಂತದಲ್ಲಿ ಭಾರತೀಯ ಮೂಲದ ಮಹಿಳೆ ಸಾವು

ಪಿಟಿಐ
Published 7 ಮಾರ್ಚ್ 2023, 13:16 IST
Last Updated 7 ಮಾರ್ಚ್ 2023, 13:16 IST
.
.   

ನ್ಯೂಯಾರ್ಕ್‌ (ಪಿಟಿಐ): ಇಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಮಗಳು ಮತ್ತು ಪೈಲಟ್‌ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ರೋಮಾ ಗುಪ್ತಾ (63) ಮತ್ತು ಆಕೆಯ ಮಗಳು ರೀವಾ ಗುಪ್ತಾ (33) ನಾಲ್ಕು ಆಸನಗಳ ಸಣ್ಣ ವಿಮಾನದಲ್ಲಿ ಲಾಂಗ್ ಐಲ್ಯಾಂಡ್‌ನ ರಿಪಬ್ಲಿಕ್ ಏರ್‌ಪೋರ್ಟ್‌ಗೆ ಹಿಂತಿರುಗುತ್ತಿದ್ದಾಗ ಕಾಕ್‌ಪಿಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಲಾಂಗ್‌ ಐಸ್‌ಲ್ಯಾಂಡ್‌ ಮನೆಗಳ ಮೇಲೆ ಬಿದ್ದಿದೆ.

ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ 23 ವರ್ಷದ ಪೈಲಟ್‌ ಮತ್ತು ರೀವಾ ಗುಪ್ತಾ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.