ADVERTISEMENT

ಭಾರತೀಯ ಎಂಜಿನಿಯರ್ ಸೇರಿ ಐವರು ಅಮೆರಿಕ ಪೌರತ್ವ ಪ್ರಮಾಣ ವಚನ ಸ್ವೀಕಾರ

ಪಿಟಿಐ
Published 26 ಆಗಸ್ಟ್ 2020, 6:22 IST
Last Updated 26 ಆಗಸ್ಟ್ 2020, 6:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌, ವಾಷಿಂಗ್ಟನ್: ಶ್ವೇತಭವನದಲ್ಲಿ ಆಯೋಜಿಸಿದ್ದ ಅಪರೂಪದ ಕಾರ್ಯಕ್ರಮದಲ್ಲಿ ಭಾರತದ ಸಾಫ್ಟ್‌ವೇರ್ ಎಂಜಿನಿಯರ್ ಸೇರಿದಂತೆ ಐವರು ವಲಸಿಗರುಅಮೆರಿಕ ಪೌರತ್ವದ ಪ್ರಮಾಣವಚನ ಸ್ವೀಕರಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾತಿ, ಧರ್ಮ ಹಾಗೂ ವರ್ಣಗಳನ್ನೊಳಗೊಂಡ ವಿಶಾಲವಾದ ವೈವಿಧ್ಯಮಯ ರಾಷ್ಟ್ರಕ್ಕೆ ಐವರು ಹೊಸ ಸದಸ್ಯರನ್ನು ಸ್ವಾಗತಿಸುತ್ತಿರುವುದಾಗಿ ಡೊನಾಲ್ಡ್ ಟ್ರಂಪ್,ಹೇಳಿದರು.

ಭಾರತದ ಸಾಫ್ಟರ್‌ವೇರ್ ಎಂಜಿನಿಯರ್ ಸುಧಾ ಸುಂದರಿ ನಾರಾಯಣ್‌ ಜತೆಗೆ, ಬೊಲಿವಿಯಾ, ಲೆಬನಾನ್‌, ಸುಡಾನ್ ಮತ್ತು ಘಾನಾ ದೇಶದ ಪ್ರಜೆಗಳು ಅಮೆರಿಕ ಪೌರತ್ವದ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದವರಿಗೆಅಮೆರಿಕದ ಗೃಹ ಇಲಾಖೆಯ ಕಾರ್ಯದರ್ಶಿ ಚಾದ್‌ ವುಲ್ಫ್‌ ಅಮೆರಿಕದ ರಾಷ್ಟ್ರಧ್ವಜ ನೀಡಿ, ಪ್ರಮಾಣ ವಚನ ಬೋಧಿಸಿದರು.

ADVERTISEMENT

ಈ ಪ್ರಮಾಣವಚನ ಸ್ವೀಕಾರ ಸಮಾಂಭದ ವಿಡಿಯೊವನ್ನು ರಿಪಬ್ಲಿಕನ್ ಸಮಾವೇಶದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.