ADVERTISEMENT

ವಂಚನೆ: ಭಾರತೀಯ ಮೂಲದ ಗೌರವ್‌ ಗುಪ್ತಾ ದೋಷಿ

ಪಿಟಿಐ
Published 18 ನವೆಂಬರ್ 2020, 10:14 IST
Last Updated 18 ನವೆಂಬರ್ 2020, 10:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ರೋಬೊ ಕಾಲ್‌ಗಳ ಮೂಲಕ ಅಮೆರಿಕದ ಗ್ರಾಹಕರಿಗೆ ವಂಚಿಸುತ್ತಿದ್ದ ಪ್ರಕರಣದಲ್ಲಿ ಭಾರತೀಯ ಮೂಲದ ವಾಯ್ಸ್‌ ಓವರ್‌ ಇಂಟರ್‌ನೆಟ್‌ ಪ್ರೊಟೊಕಾಲ್‌ ಪ್ರೊವೈಡರ್‌ ಕಂಪನಿ ಇ–ಸಂಪರ್ಕ್‌ ಹಾಗೂ ಅದರ ನಿರ್ದೇಶಕ ಗೌರವ್‌ ಗುಪ್ತಾ ಅವರು ದೋಷಿ ಎಂದು ಅಮೆರಿಕದ ಫೆಡರಲ್‌ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಗುಪ್ತಾ ಮತ್ತು ಇ–ಸಂಪರ್ಕ್‌ ಕಂಪನಿಯು ಮೇ 2015ರಿಂದ ಜೂನ್‌ 2020ರ ಅವಧಿಯಲ್ಲಿ ಫ್ಲಾರಿಡಾದಲ್ಲಿ ಸುಮಾರು 60 ಸರ್ವರ್‌ಗಳನ್ನು ನಿರ್ವಹಿಸಿತ್ತು. ಇವುಗಳ ಮೂಲಕ ಭಾರತದಲ್ಲಿರುವ ಅಪರಾಧಿಗಳು ಅಮೆರಿಕದ ಗ್ರಾಹಕರ ಜೊತೆ ಸಂಪರ್ಕ ಸಾಧಿಸಲು ನೆರವು ನೀಡುತ್ತಿತ್ತು.ಇದರಿಂದ ಅಮೆರಿಕನ್ನರಿಗೆ ಸುಮಾರು₹148.52 ಕೋಟಿ (20 ಮಿಲಿಯನ್‌ ಡಾಲರ್‌) ನಷ್ಟ ಉಂಟು ಮಾಡಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಸರ್ವರ್‌ಗಳಲ್ಲಿ ರೋಬೊಕಾಲ್ ವಾಯ್ಸ್‌ಮೇಲ್‌ ರೆಕಾರ್ಡಿಂಗ್‌ ಸೇರಿದಂತೆ 1.30 ಲಕ್ಷಕ್ಕೂ ಅಧಿಕ ಕರೆಗಳು ದಾಖಲಾಗಿವೆ ಎಂದೂ ನ್ಯಾಯಾಲಯ ತಿಳಿಸಿದೆ.

ADVERTISEMENT

‘ಪ್ರತಿವಾದಿಗಳು ಸ್ಕ್ಯಾಮ್‌ ಕರೆಗಳ ಮೂಲಕ ಅಮೆರಿಕದ ಗ್ರಾಹಕರ ಮೇಲೆ ದಾಳಿ ನಡೆಸಿವೆ. ವಯಸ್ಸಾದವರು ಮತ್ತು ದುರ್ಬಲರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಲ್ಲದೆ ಅವರನ್ನು ಆರ್ಥಿಕ ವಿನಾಶಕ್ಕೆ ದೂಡಿವೆ’ ಎಂದು ಅಮೆರಿಕದ ಅಟಾರ್ನಿ ಬ್ಯೂಂಗ್‌ಜೆ ಪಾಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.