ADVERTISEMENT

ಅಮೆರಿಕ: ಮಾನವ ಕಳ್ಳಸಾಗಣೆ ಆರೋಪಿ ಬಿಡುಗಡೆ

ಪಿಟಿಐ
Published 25 ಜನವರಿ 2022, 12:36 IST
Last Updated 25 ಜನವರಿ 2022, 12:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನ್ಯೂಯಾರ್ಕ್‌ (ಪಿಟಿಐ): ಮಾನವ ಕಳ್ಳಸಾಗಣೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಫ್ಲೋರಿಡಾದ ವ್ಯಕ್ತಿಯೊಬ್ಬನನ್ನು ಷರತ್ತುಬದ್ಧವಾಗಿ ಬಿಡುಗಡೆ ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿ ಇಬ್ಬರು ಭಾರತೀಯರನ್ನು ಮಾನವ ಕಳ್ಳಸಾಗಣೆ ಮಾಡುತ್ತಿದ್ದಾಗ ಈತ ಸಿಕ್ಕಿಬಿದ್ದಿದ್ದ.

ಸ್ಟೀವ್‌ ಶಾಂಡ್‌ ಎಂಬಾತನನ್ನು ಕಳೆದ ವಾರ ಬಂಧಿಸಲಾಗಿತ್ತು. ಅಮೆರಿಕಕ್ಕೆ ಪ್ರವೇಶಿಸುವ ಅಥವಾ ಸೂಕ್ತ ದಾಖಲೆಗಳಿಲ್ಲದೆ ಉಳಿದುಕೊಂಡಿರುವ ವಿದೇಶಿಗರನ್ನು ಇತರೆಡೆ ಸಾಗಿಸುವ ಅಥವಾ ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ADVERTISEMENT

ಮಿನ್ನೆಸೋಟಾದ ಅಮೆರಿಕ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಹಿಲ್ದಿ ಬೌಬೀರ್‌ ಅವರ ಮುಂದೆ ಜನವರಿ 20 ರಂದು ಆರೋಪಿ ಶಾಂಡ್‌ ಅನ್ನು ಹಾಜರುಪಡಿಸಲಾಗಿತ್ತು. ವಿಚಾರಣೆಯನ್ನು ಜನವರಿ 24ಕ್ಕೆ ನಿಗದಿಪಡಿಸಲಾಗಿತ್ತು.

ವರ್ಚುವಲ್‌ ರೂಪದಲ್ಲಿ ವಿಚಾರಣೆ ನಡೆದು ಆರೋಪಿಯ ಷರತ್ತುಬದ್ಧ ಬಿಡುಗಡೆಗೆ ಆದೇಶಿಸಲಾಗಿದೆ. ಆದರೆ ಇನ್ನೂ ವಿಚಾರಣೆ ಬಾಕಿ ಇದೆ ಎಂದು ನ್ಯಾಯಾಲಯ ಹೇಳಿದೆ ಎಂದುಅಮೆರಿಕಾದ ಉತ್ತರ ಡಕೋಟಾ ರಾಜ್ಯದ ಗ್ರ್ಯಾಂಡ್ ಫೋರ್ಕ್ಸ್ ಹೆರಾಲ್ಡ್ ಪತ್ರಿಕೆಯ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.