ADVERTISEMENT

ಸ್ಪೇನ್‌ಗೆ ಜೈಶಂಕರ್‌ ಭೇಟಿ: ರಾಯಭಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಭಾಗಿ

ಪಿಟಿಐ
Published 13 ಜನವರಿ 2025, 15:51 IST
Last Updated 13 ಜನವರಿ 2025, 15:51 IST
ಜೈಶಂಕರ್
ಜೈಶಂಕರ್   

ಮ್ಯಾಡ್ರಿಡ್‌ : ಸ್ಪೇನ್‌ ಮತ್ತು ಐರೋಪ್ಯ ಒಕ್ಕೂಟದ ಜೊತೆಗಿನ ಭಾರತದ ಬಾಂಧವ್ಯವನ್ನು ‘ಈ ಪ್ರಕ್ಷುಬ್ಧ ಸಂದರ್ಭದಲ್ಲಿ ಸ್ಥಿರಗೊಳಿಸಬೇಕಾದ ಅಗತ್ಯವಿದೆ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಪ್ರತಿಪಾದಿಸಿದರು.

ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ರಾಯಭಾರಿಗಳ 9ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಜೈಶಂಕರ್‌, ‘ರಾಷ್ಟ್ರಗಳು ತಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯಿಂದ ತಮ್ಮ ವಿಶಿಷ್ಟ ರಾಜತಾಂತ್ರಿಕತೆಯನ್ನು ಮುಂದಿಡಲು ಹೇಗೆ ಪ್ರಯತ್ನಿಸುತ್ತವೆ’ ಎಂಬುದನ್ನು ವಿವರಿಸಿದರು.

ವಿದೇಶಾಂಗ ಸಚಿವರಾದ ನಂತರ ಸ್ಪೇನ್‌ಗೆ ಮೊದಲ ಬಾರಿ ಭೇಟಿ ನೀಡಿರುವ ಜೈಶಂಕರ್‌, ಸೋಮವಾರದಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ADVERTISEMENT

ಸ್ಪೇನ್‌ ಅಧ್ಯಕ್ಷ ಪೆದ್ರೊ ಭಾರತಕ್ಕೆ ಭೇಟಿ ನೀಡಿದ ಎರಡೂವರೆ ತಿಂಗಳ ನಂತರ ಜೈಶಂಕರ್‌ ಇಲ್ಲಿಗೆ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.