ADVERTISEMENT

ಇಂಡೊನೇಷ್ಯಾದಲ್ಲಿ ಪ್ರವಾಸಿ ಬಸ್ ಅಪಘಾತ: 14 ಜನ ಸಾವು

ಏಜೆನ್ಸೀಸ್
Published 16 ಮೇ 2022, 11:12 IST
Last Updated 16 ಮೇ 2022, 11:12 IST
ಇಂಡೊನೇಷ್ಯಾದ ಪೂರ್ವ ಜಾವದಲ್ಲಿ ಅಪಘಾತಕ್ಕೆ ಸಿಲುಕಿದ ಬಸ್ ತೆರವು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ರಕ್ಷಣಾ ಸಿಬ್ಬಂದಿ. ಎಪಿ/ಪಿಟಿಐ ಚಿತ್ರ
ಇಂಡೊನೇಷ್ಯಾದ ಪೂರ್ವ ಜಾವದಲ್ಲಿ ಅಪಘಾತಕ್ಕೆ ಸಿಲುಕಿದ ಬಸ್ ತೆರವು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ರಕ್ಷಣಾ ಸಿಬ್ಬಂದಿ. ಎಪಿ/ಪಿಟಿಐ ಚಿತ್ರ   

ಸುರಬಾಯ, ಇಂಡೊನೇಷ್ಯಾ(ಎಪಿ): ಇಂಡೊನೇಷ್ಯಾದ ಪ್ರಮುಖ ದ್ವೀಪ ಪ್ರದೇಶ ಜಾವಾದ ಹೆದ್ದಾರಿಯಲ್ಲಿ ಪ್ರವಾಸಿ ಬಸ್ಸೊಂದು ನಾಮಫಲಕಕ್ಕೆ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಮೃತಪಟ್ಟಿದ್ದು, 19ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಚಾಲಕ ನಿದ್ರೆಗೆ ಜಾರಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸೆಂಟ್ರಲ್ ಜಾವಾದ ಜನಪ್ರಿಯ ಗುಡ್ಡಗಾಡು ರೆಸಾರ್ಟ್ ಡೀಂಗ್ ಪ್ಲೇಟು ಸ್ಥಳದಿಂದ ವಾಪಸ್ ಸುರಬಾಯಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಇಂಡೊನೇಷ್ಯಾದಲ್ಲಿ ಸರಿಯಾದ ರಸ್ತೆ ಸುರಕ್ಷತಾ ಕ್ರಮಗಳು ಇಲ್ಲದ ಪರಿಣಾಮ, ರಸ್ತೆ ಅಪಘಾತಗಳು ಸಾಮಾನ್ಯವಾಗಿವೆ ಎಂದು ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT