ADVERTISEMENT

ಇರಾನ್‌ನಲ್ಲಿ ಅಮೆರಿಕ ದಾಳಿಯ ಭೀತಿ

ಏಜೆನ್ಸೀಸ್
Published 28 ಜನವರಿ 2026, 14:44 IST
Last Updated 28 ಜನವರಿ 2026, 14:44 IST
   

ದುಬೈ: ಅಮೆರಿಕ ಸೇನೆಯ ದಾಳಿಯ ಸಾಧ್ಯತೆಯ ಕಾರಣಕ್ಕೆ ಇರಾನ್ ಅಧಿಕಾರಿಗಳು ಪಶ್ಚಿಮ ಏಷ್ಯಾದ ಇತರ ದೇಶಗಳನ್ನು ಬುಧವಾರ ಸಂಪರ್ಕಿಸಿದ್ದಾರೆ.

ಯಾವುದೇ ದಾಳಿಗೆ ತಮ್ಮ ವಾಯುಪ್ರದೇಶವನ್ನು ಬಳಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳು ಹೇಳಿವೆ. ಆದರೆ ಅಮೆರಿಕ ತನ್ನ ಯುಎಸ್ಎಸ್‌ ಅಬ್ರಹಾಂ ಲಿಂಕನ್‌ ಯುದ್ಧನೌಕೆ ಮತ್ತು ಕ್ಷಿಪಣಿ ನಾಶಕಗಳನ್ನು ಸಮುದ್ರ ಪ್ರದೇಶಕ್ಕೆ ಸ್ಥಳಾಂತರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಮುಂದಿನ ನಡೆ ಏನು ಎಂಬುದು ಅಸ್ಪಷ್ಟವಾಗಿದೆ. ಶಾಂತಿಯುತ ಪ್ರತಿಭಟನಕಾರರ ಹತ್ಯೆ ಹಾಗೂ ಬಂಧಿತರನ್ನು ಸಾಮೂಹಿಕವಾಗಿ ಗಲ್ಲಿಗೇರಿಸುವ ಇರಾನ್‌ ನಿರ್ಧಾರದ ವಿರುದ್ಧ ಟ್ರಂಪ್‌ ಈ ಮೊದಲು ಎಚ್ಚರಿಕೆ ನೀಡಿದ್ದರು. 

ADVERTISEMENT

ಇರಾನ್‌ನಲ್ಲಿ ಡಿಸೆಂಬರ್‌ 28ರಂದು ‍ಪ್ರತಿಭಟನೆಗಳು ಆರಂಭಗೊಂಡು ಶೀಘ್ರವೇ ದೇಶದಾದ್ಯಂತ ವ್ಯಾಪಿಸಿ, ಹಿಂಸಾಚಾರಕ್ಕೆ ತಿರುಗಿವೆ. ಇದರಿಂದ 6,221 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.