ADVERTISEMENT

ರಷ್ಯಾ: ಸರಕು ಸಾಗಣೆಗೆ ಹೊಸ ಮಾರ್ಗ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 19:43 IST
Last Updated 12 ಜೂನ್ 2022, 19:43 IST
   

ಬ್ಲೂಮ್‌ಬರ್ಗ್‌: ‘ಭಾರತಕ್ಕೆ ರಷ್ಯಾದ ಸರಕುಗಳ ಸಾಗಣೆಗೆ ಇರಾನ್ ಹೊಸ ವ್ಯಾಪಾರಿ ಮಾರ್ಗ ಆರಂಭಿಸಿದೆ’ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಶಿಪ್ಪಿಂಗ್ ಲೈನ್ಸ್ ಗ್ರೂಪ್ ತಿಳಿಸಿದೆ’ ಎಂದು ಬಂದರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

41 ಟನ್ ತೂಕದ ಕಂಟೇನರ್‌ಗಳನ್ನು ಒಳಗೊಂಡ ರಷ್ಯಾದ ಸರಕನ್ನು ಹೊತ್ತ ಹಡಗು ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಬಂದರು ನಗರ ಅಸ್ಟ್ರಾಖಾನ್‌ ಕಡೆಗೆ ಪ್ರಯಾಣ ಬೆಳೆಸಿದೆ ಎಂದು ಸರ್ಕಾರಿ ಸ್ವಾಮ್ಯದ ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಹೊಸ ವ್ಯಾಪಾರಿ ಮಾರ್ಗವನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವ ಸಲುವಾಗಿ ಹೊರಟಿರುವ ಈ ಸರಕು ಹಡಗಿನ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಈ ಕುರಿತು ಎನ್‌ಡಿಟಿವಿ ವರದಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.