ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಟೆಹರಾನ್: ‘ಅಗತ್ಯ ಇಲ್ಲದಿದ್ದರೆ ಇರಾನ್‌ಗೆ ಬರಬೇಡಿ’ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಭಾರತೀಯರಿಗೆ ಸಲಹೆ ನೀಡಿದೆ. ‘ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಗಮನಹರಿಸಿ, ನಮ್ಮ ಸಲಹೆಗಳನ್ನು ಕಾಲ ಕಾಲಕ್ಕೆ ಅನುಸರಿಸಿ’ ಎಂದೂ ಅದು ಹೇಳಿದೆ.
‘ಕೆಲವು ವಾರಗಳಿಂದ ಇರಾನ್‌ನಲ್ಲಿ ಭದ್ರತಾ ವಿಚಾರಗಳಿಗೆ ಸಂಬಂಧಿಸಿ ಬೆಳವಣಿಗೆಗಳು ನಡೆಯುತ್ತಿವೆ. ಒಂದು ವೇಳೆ ಈಗಾಗಲೇ ಇರಾನ್‌ನಲ್ಲಿ ಇದ್ದರೆ, ತಕ್ಷಣವೇ ಇಲ್ಲಿಂದ ವಾಪಸಾಗಿ’ ಎಂದಿದೆ. ಕಳೆದ ತಿಂಗಳು ಇರಾನ್ ಮತ್ತು ಇಸ್ರೇಲ್ ನಡುವೆ 12 ದಿನಗಳವರೆಗೆ ಯುದ್ಧ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.