ADVERTISEMENT

ಇರಾನ್‌: ನೀತಿ ಸಂಹಿತೆ ಉಲ್ಲಂಘನೆ, ಮಹಿಳೆಗೆ 74 ಚಾಟಿ ಏಟು, ದಂಡ

ಏಜೆನ್ಸೀಸ್
Published 7 ಜನವರಿ 2024, 14:48 IST
Last Updated 7 ಜನವರಿ 2024, 14:48 IST
   

ತೆಹ್ರಾನ್‌: ಮಹಿಳೆಯೊಬ್ಬರು ಸಾರ್ವಜನಿಕ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ 74 ಬಾರಿ ಚಾಟಿ ಏಟು ನೀಡುವಂತೆ ಮತ್ತು ವಸ್ತ್ರದಿಂದ ತಲೆಯನ್ನು ಮುಚ್ಚಿಕೊಳ್ಳದ ಕಾರಣಕ್ಕೆ 25 ಡಾಲರ್‌ (₹2079) ದಂಡ ವಿಧಿಸಿ ಎಂದು ಇರಾನ್‌ನ ಕೋರ್ಟ್ ಆದೇಶ ನೀಡಿದೆ.

ಅಪರಾಧಿ ರೋಯಾ ಹೆಶ್ಮತಿ ಅವರು ತೆಹ್ರಾನ್‌ನ ಸಾರ್ವಜನಿಕ ಪ್ರದೇಶಗಳಲ್ಲಿ ನೀತಿ ಸಂಹಿತೆಗಳಿಗೆ ಅಗೌರವ ತೋರಿದ್ದಾರೆ ಎಂದು ನ್ಯಾಯಾಂಗದ ‘ಮಿಜಾನ್‌’ ಆನ್‌ಲೈನ್‌ ವೆಬ್‌ಸೈಟ್‌ ಹೇಳಿದೆ.

ಇರಾನ್‌ಗಳಲ್ಲಿ ಮಹಿಳೆಯರು ಕುತ್ತಿಗೆ ಮತ್ತು ತಲೆಯನ್ನು ಮುಚ್ಚುವಂತೆ ವಸ್ತ್ರ ಧರಿಸುವುದು ಕಡ್ಡಾಯ.

ADVERTISEMENT

‘ಹೆಡ್ ಸ್ಕಾರ್ಫ್ ಧರಿಸದ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಹೆಶ್ಮತಿ ಅವರನ್ನು ಕಳೆದ ಏಪ್ರಿಲ್‌ನಲ್ಲಿ ಬಂಧಿಸಲಾಗಿದೆ’ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.