ADVERTISEMENT

ಇತರ ಉಗ್ರ ಸಂಘಟನೆ ಸದಸ್ಯರನ್ನು ಸೆಳೆಯುತ್ತಿರುವ ಐಎಸ್‌ಐಎಲ್‌–ಕೆ: ವಿಶ್ವಸಂಸ್ಥೆ

ಪಿಟಿಐ
Published 31 ಜುಲೈ 2022, 13:40 IST
Last Updated 31 ಜುಲೈ 2022, 13:40 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ: ‘ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ನ ಇರಾಕ್‌ ಮತ್ತು ಲೆವಾಂಟ್‌ –ಖೋರಾಸನ್‌ (ಐಎಸ್‌ಐಎಲ್‌–ಕೆ) ತನ್ನ ಬಲ ವೃದ್ಧಿಸಿಕೊಳ್ಳುವಸಲುವಾಗಿ ಇತರ ಉಗ್ರ ಸಂಘಟನೆಗಳ ಸದಸ್ಯರನ್ನು ಸೆಳೆಯುತ್ತಿದೆ’ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

‘ಈ ಸಂಘಟನೆಯು ಪೂರ್ವ ಅಫ್ಗಾನಿಸ್ತಾನದ ಮೇಲೆ ಮತ್ತೆ ನಿಯಂತ್ರಣ ಸಾಧಿಸುತ್ತದೆಯೊ ಇಲ್ಲವೊ ಎಂಬುದು ಖಚಿತವಾಗಿಲ್ಲ. ಒಂದೊಮ್ಮೆ ಪ್ರಾಬಲ್ಯ ಸಾಧಿಸುವಲ್ಲಿ ಸಫಲವಾದರೆ, ಈ ಪ್ರದೇಶದ ಮೇಲೆ ಹಿಡಿತ ಹೊಂದಲು ತಾಲಿಬಾನ್‌ ಹರಸಾಹಸ ‍ಪಡಬೇಕಾಗುತ್ತದೆ’ ಎಂದು ವರದಿ ಹೇಳಿದೆ.

‘ತಾಲಿಬಾನ್‌ ಸಂಘಟನೆ ವಿರುದ್ಧ ಅಸಮಾಧಾನಗೊಂಡವರು ಹಾಗೂ ಸ್ಥಳೀಯ ಅಲ್ಪಸಂಖ್ಯಾತರನ್ನು ಸೆಳೆಯಲು ಐಎಸ್‌ಐಎಲ್‌–ಕೆ ಮುಂದಾಗಿದೆ. ಇತರ ಸಂಘಟನೆಗಳಲ್ಲಿ ನೀಡುತ್ತಿರುವುದಕ್ಕಿಂತಲೂ ಅಧಿಕ ಮಾಸಿಕ ವೇತನ ನೀಡುವ ಆಮಿಷ ಒಡ್ಡುತ್ತಿದೆ. ವ್ಯಾಪ್ತಿ ವಿಸ್ತರಿಸಿಕೊಂಡು ಸಾಗುತ್ತಿದ್ದರೂ ಕೂಡ ಸದಸ್ಯರ ಕೊರತೆಯಿಂದಾಗಿ ಸಂಘಟನೆಗೆ ತನ್ನ ಶತ್ರು ರಾಷ್ಟ್ರಗಳ ಮೇಲೆ ಹೆಚ್ಚಿನ ದಾಳಿ ನಡೆಸಲು ಆಗುತ್ತಿಲ್ಲ’ ಎಂದು ವಿವರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.