ADVERTISEMENT

ಜಾಗತಿಕ ಭಯೋತ್ಪಾದಕ ಸಂಘಟನೆ ನಾಯಕನೇ ಭಾರತದ ಘಟಕಕ್ಕೆ ಮುಖ್ಯಸ್ಥ: ವಿಶ್ವಸಂಸ್ಥೆ

ಪಿಟಿಐ
Published 4 ಫೆಬ್ರುವರಿ 2021, 7:58 IST
Last Updated 4 ಫೆಬ್ರುವರಿ 2021, 7:58 IST
ಆ್ಯಂಟೊನಿಯೊ ಗುಟೆರಸ್‌
ಆ್ಯಂಟೊನಿಯೊ ಗುಟೆರಸ್‌   

ವಿಶ್ವಸಂಸ್ಥೆ: ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ನ ಇರಾಕ್‌ ಮತ್ತು ಲೆವಾಂಟ್‌ –ಖೋರಾಸನ್‌ನ (ಐಎಸ್‌ಐಎಲ್‌–ಕೆ) ಹೊಸ ನಾಯಕ ಶಿಹಾಬ್‌ ಅಲ್‌ ಮುಜಾಹಿರ್‌, ಭಾರತ, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಮಾಲ್ಡೀವ್ಸ್‌, ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿನ ಸಂಘಟನೆಯ ಘಟಕಗಳ ನಾಯಕತ್ವ ವಹಿಸಿದ್ದಾನೆ.

ಭಯೋತ್ಪಾದಕ ಸಂಘಟನೆಯಾದ ಹಕ್ಕಾನಿ ಜಾಲದೊಂದಿಗೆ ಈತ ನಂಟು ಹೊಂದಿದ್ದ ಎನ್ನಲಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ವಿವರಿಸಲಾಗಿದೆ.

ಜಾಗತಿಕ ಶಾಂತಿ ಹಾಗೂ ಭದ್ರತೆಗೆ ಐಎಸ್‌ಐಎಲ್‌–ಕೆ ಒಡ್ಡಿರುವ ಬೆದರಿಕೆ ಕುರಿತಂತೆ ಅವರು 12ನೇ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಅಫ್ಗಾನಿಸ್ತಾನದಲ್ಲಿ ಸಂಘಟನೆಯ 1,000– 2,200 ಉಗ್ರರು ಸಕ್ರಿಯರಾಗಿದ್ದಾರೆ ಎಂದು ವಿವರಿಸಲಾಗಿದೆ.

ADVERTISEMENT

‘ಸಂಘಟನೆಯ ಶಕ್ತಿಯನ್ನು ಉಡುಗಿಸುವ ಪ್ರಯತ್ನ ಮುಂದುವರಿದಿದೆ. ಆದರೂ, ಅದು ಮತ್ತೆ ತನ್ನ ವಿಧ್ವಂಸಕ ಶಕ್ತಿಯನ್ನು ವೃದ್ಧಿಸಿಕೊಂಡು ಪುಟಿದೆದ್ದಿದೆ’ ಎಂದೂ ವರದಿಯಲ್ಲಿ ಹೇಳಲಾಗಿದೆ.

‘ಕಳೆದ ಒಂದು ವರ್ಷದಿಂದ ಕೋವಿಡ್‌ನಿಂದ ಜಗತ್ತು ತತ್ತರಿಸಿದೆ. ಈ ಸಂದರ್ಭದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಅಲ್ಪ ಹಿನ್ನಡೆಯಾಗಿದ್ದರೂ, ಐಎಸ್‌ಐಎಲ್‌–ಕೆ ವಿರುದ್ಧ ಹೋರಾಡಲು ಎಲ್ಲ ದೇಶಗಳು ಒಂದಾಗಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.