ADVERTISEMENT

ಐಎಸ್‌ ಉಗ್ರ ಸಂಘಟನೆಯ ಮಹಿಳೆಗೆ ಮದುವೆ ಉಡುಗೊರೆಯಾಗಿ ಸಿಕ್ಕಿದ ಎಕೆ–47 ಮಾರಾಟ

ಐಎಸ್‌ ಉಗ್ರ ಸಂಘಟನೆ ಸೇರಿದ್ದ ಜರ್ಮನಿ ಮಹಿಳೆಯ ಕೃತ್ಯ

ಏಜೆನ್ಸೀಸ್
Published 20 ಆಗಸ್ಟ್ 2020, 11:51 IST
Last Updated 20 ಆಗಸ್ಟ್ 2020, 11:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬರ್ಲಿನ್‌:ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದ ಜರ್ಮನ್‌ ಮಹಿಳೆಯೊಬ್ಬರು ತನಗೆ ಮದುವೆ ಉಡುಗೊರೆಯಾಗಿ ನೀಡಿದ್ದ ಎಕೆ 47 ರೈಫಲ್ ಅನ್ನು ಮಾರಾಟ ಮಾಡಿದ್ದಾರೆ ಎಂದು ಜರ್ಮನ್‌ಪ್ರಾಸಿಕ್ಯೂಟರ್‌ ಗುರುವಾರ ಆರೋಪಿಸಿದ್ದಾರೆ.

‘ಈ ಮೂಲಕ ಜೆನೆಪ್‌ ಜಿ ಕಾನೂನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧವಿದೇಶಿ ಉಗ್ರ ಸಂಘಟನೆಯ ಚಟುವಟಿಕೆಯಲ್ಲಿ ಭಾಗಿ, ಶಸ್ತ್ರಾಸ್ತ್ರ ನಿಯಂತ್ರಣ ಕಾನೂನು ಉಲ್ಲಂಘನೆ ಮತ್ತು ಯುದ್ಧ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ’ ಎಂದುಜರ್ಮನ್‌ ಫೆಡರಲ್‌ ಪ್ರಾಸಿಕ್ಯೂಟರ್‌ ಹೇಳಿದರು.

‘ಜರ್ಮನ್‌ ಪ್ರಜೆಜೆನೆಪ್‌ ಜಿ ಅಕ್ಟೋಬರ್‌ 2014 ರಂದು ಸಿರಿಯಾಗೆ ತೆರಳಿ ಅಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಗೆ ಸೇರ್ಪಡೆಯಾದರು. ಸಂಘಟನೆಯ ಸದಸ್ಯನನ್ನೇ ವರಿಸಿದರು. ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಜರ್ಮನಿಯಲ್ಲಿರುವ ತನ್ನ ಸ್ನೇಹಿತರನ್ನು ಇಸ್ಲಾಮಿಕ್‌ ಸ್ಟೇಟ್‌ಗೆ ಸೇರ್ಪಡೆಯಾಗಲು ಆಹ್ವಾನಿಸಿದ್ದರು’ ಎಂದು ಅವರು ಹೇಳಿದರು.

ADVERTISEMENT

‘ಆದರೆ 2015ರಲ್ಲಿಜೆನೆಪ್‌ ಜಿ ಪತಿ ಮೃತಪಟ್ಟಿದ್ದಾರೆ. ಹಾಗಾಗಿ ಹಣಕಾಸಿನ ಕೊರತೆಯಿಂದಾಗಿ ತನಗೆ ಮದುವೆ ಉಡುಗೊರೆಯಾಗಿ ದೊರೆತ ಎಕೆ–47 ಅನ್ನು ಮಾರಾಟ ಮಾಡಿದ್ದಾರೆ’ ಎಂದುಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.