ಜೆರುಸಲೇಂ: ಲೆಬನಾನ್‌ನ ದಕ್ಷಿಣ ಭಾಗದಲ್ಲಿ ಇಸ್ರೇಲ್ ಸೋಮವಾರ ವಾಯುದಾಳಿ ನಡೆಸಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಲೆಬನಾನ್ ಮಾಧ್ಯಮ ವರದಿ ಮಾಡಿದೆ.
ಲೆಬನಾನ್ ಕಳೆದ ವಾರವಷ್ಟೇ ಇಸ್ರೇಲ್ ಅನ್ನು ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿತ್ತು. ಆಗ 12 ಮಕ್ಕಳು ಸತ್ತಿದ್ದರು. ಇಂದಿನದು ಅದಕ್ಕೆ ಪ್ರತಿಯಾಗಿ ನಡೆದ ದಾಳಿಯಲ್ಲ ಎನ್ನಲಾಗಿದೆ.
ಇಸ್ರೇಲ್ ಸೋಮವಾರ ಬೆಳಿಗ್ಗೆ ನಡೆಸಿದ ದಾಳಿಯಿಂದಾಗಿ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಹೆಚ್ಚಿನ ಪ್ರಾಣಹಾನಿಯ ವಿವರ ಸದ್ಯಕ್ಕೆ ತಿಳಿದುಬಂದಿಲ್ಲ.
ಇಸ್ರೇಲ್ ಸೇನೆಯ ಅಧಿಕಾರಿಗಳು, ಸೇನೆಯು ಹಿಜ್ಬುಲ್ಲಾ ನೆಲೆ ಗುರಿಯಾಗಿಸಿ ನಿರಂತರ ದಾಳಿ ನಡೆಸುತ್ತಿದ್ದು, ಇಂದು ಅದರಂತೆ ದಾಳಿ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.