ADVERTISEMENT

ಉದ್ಯಮಿ ರೀನಾಗೆ ‘ಪ್ರವಾಸಿ ಭಾರತೀಯ ಸಮ್ಮಾನ್‌‘ ಪ್ರಶಸ್ತಿ

ಪಿಟಿಐ
Published 3 ಜನವರಿ 2023, 13:40 IST
Last Updated 3 ಜನವರಿ 2023, 13:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೆರುಸಲೇಂ : ಪ್ರಸಕ್ತ ಸಾಲಿನ ‘ಪ್ರವಾಸಿ ಭಾರತೀಯ ಸನ್ಮಾನ’ ಪ್ರಶಸ್ತಿಗೆ ಆಯ್ಕೆಯಾಗಿರುವ 21 ಪ್ರಮುಖರಲ್ಲಿ ಇಲ್ಲಿನ ಹೆಸರಾಂತ ಹೋಟೆಲ್‌ ಉದ್ಯಮಿ ರೀನಾ ವಿನೋದ್‌ ಪುಷ್ಕರ್ಣ ಅವರು ಸೇರಿದ್ದಾರೆ.

ರೀನಾ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರ ಕುಟುಂಬ ಆತ್ಮೀಯರು ಹೌದು. ಭಾರತ –ಇಸ್ರೇಲ್‌ ಉದ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರೀನಾ ಪ್ರಮುಖರಾಗಿದ್ದಾರೆ.ಮಧ್ಯಪ್ರದೇಶದ ಇಂದೋರ್‌ನಲ್ಲಿ ಜ.8 ರಿಂದ ನಡೆಯುವ ‘ಪ್ರವಾಸಿ ಭಾರತೀಯ ದಿವಸ್‌‘ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಇದು, ಭಾರತದ ಅಭಿವೃದ್ಧಿಗೆ ಶ್ರಮಿಸುವ, ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಗೌರವವಾಗಿದೆ. ರೀನಾ ಅವರು ಭಾರತ–ಇಸ್ರೇಲ್‌ ವ್ಯಾಪಾರ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರಾಗಿದ್ದಾರೆ. ಪ್ರಧಾನಿ ಮೋದಿ 2017ರಲ್ಲಿ ಇಸ್ರೇಲ್‌ಗೆ ಹೋಗಿದ್ದಾಗ ಅಡುಗೆ ಸಿದ್ಧಪಡಿಸಿದ್ದ ತಂಡದ ಪ್ರಮುಖರಾಗಿದ್ದರು. 2018ರಲ್ಲಿ ಭಾರತಕ್ಕೆ ಬಂದಿದ್ದ ಇಸ್ರೇಲ್‌ ಪ್ರಧಾನಿ ಏರಿಯಲ್‌ ಶರೋನ್‌ ನೇತೃತ್ವದ ನಿಯೋಗದ ಭಾಗವಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.