ADVERTISEMENT

ಹಮಾಸ್‌ ಸೇನಾ ತಾಣಗಳ ಮೇಲೆ ಇಸ್ರೇಲ್‌ ದಾಳಿ

ಏಜೆನ್ಸೀಸ್
Published 16 ಜುಲೈ 2022, 13:10 IST
Last Updated 16 ಜುಲೈ 2022, 13:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೆರುಸಲೆಮ್‌ (ಎಪಿ): ಇಸ್ರೇಲ್‌ ಸೇನೆಯು ಹಮಾಸ್‌ ಸೇನಾತಾಣಗಳನ್ನು ಗುರಿಯಾಗಿಸಿಕೊಂಡು ಶನಿವಾರ ದಾಳಿ ನಡೆಸಿದೆ.

‘ಇಸ್ರೇಲ್‌ ಮೇಲೆ ನಡೆದ ರಾಕೆಟ್‌ ದಾಳಿಗೆ ಪ್ರತೀಕಾರವಾಗಿ ಈ ದಾಳಿ ಮಾಡಲಾಗಿದೆ’ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಇಸ್ರೇಲ್‌–ಪ‍್ಯಾಲೆಸ್ಟೀನ್‌ ಪ್ರವಾಸ ಮುಕ್ತಾಯಗೊಂಡ ಬೆನ್ನಲ್ಲೇ ದಾಳಿ–ಪ್ರತಿದಾಳಿಗಳು ನಡೆದಿವೆ.

ADVERTISEMENT

‘ದಕ್ಷಿಣ ಇಸ್ರೇಲ್‌ನ ವಿವಿಧೆಡೆ ನಡೆಸಲಾಗಿರುವ ರಾಕೆಟ್‌ ದಾಳಿಯಿಂದ ನಾಗರಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಹಾನಿ ಕೂಡ ವರದಿಯಾಗಿಲ್ಲ’ ಎಂದು ಇಸ್ರೇಲ್‌ ಸೇನೆ ಸ್ಪಷ್ಟಪಡಿಸಿದೆ.

ಪ್ಯಾಲೆಸ್ಟೀನ್‌ನ ಯಾವ ಗುಂಪುಗಳೂರಾಕೆಟ್‌ ದಾಳಿಯ ಹೊಣೆ ಹೊತ್ತಿಲ್ಲ. ದಾಳಿ ಹಿಂದೆ ಹಮಾಸ್‌ ಕೈವಾಡವಿದೆ ಎಂದು ಇಸ್ರೇಲ್‌ ಆರೋಪಿಸಿದೆ.

ಗುಂಡಿನ ದಾಳಿಯಲ್ಲಿ 10 ವರ್ತಕರ ಸಾವು

ಜಯಪುರ (ಎಪಿ): ‘ಇಂಡೊನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಅಪರಿಚಿತ ವ್ಯಕ್ತಿಗಳು 10 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಸುಮಾರು 20 ಮಂದಿ ಬಂದೂಕುಧಾರಿಗಳು ನೊಗೊಲೇಟ್‌ ಗ್ರಾಮಕ್ಕೆ ನುಗ್ಗಿ ಕೃತ್ಯ ಎಸಗಿದ್ದಾರೆ. ವೆಸ್ಟ್‌ ಪಪುವಾ ಲಿಬರೇಷನ್‌ ಆರ್ಮಿಯ ಸದಸ್ಯರೇ ದಾಳಿ ನಡೆಸಿರಬಹುದೆಂಬ ಅನುಮಾನವಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.