ADVERTISEMENT

ಸಿರಿಯಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಇಬ್ಬರು ನಾಗರಿಕರ ಸಾವು

ಏಜೆನ್ಸೀಸ್
Published 24 ನವೆಂಬರ್ 2021, 10:32 IST
Last Updated 24 ನವೆಂಬರ್ 2021, 10:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಡಮಾಸ್ಕಸ್: ‘ದೇಶದ ಮಧ್ಯ ಭಾಗದಲ್ಲಿರುವ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನ ಯುದ್ಧವಿಮಾನಗಳು ಬುಧವಾರ ದಾಳಿ ನಡೆಸಿವೆ. ಈ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಏಳು ಜನರು ಗಾಯಗೊಂಡಿದ್ದಾರೆ’ ಎಂದು ಸಿರಿಯಾ ಹೇಳಿದೆ.

ಗಾಯಗೊಂಡವರ ಪೈಕಿ ಆರು ಜನ ಯೋಧರಿದ್ದಾರೆ ಎಂದು ಸೇನಾಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರಿ ಒಡೆತನದ ಮಾಧ್ಯಮ ಸಂಸ್ಥೆ ಎಸ್‌ಎಎನ್‌ಎ ವರದಿ ಮಾಡಿದೆ.

‘ನೆರೆಯ ಲೆಬನಾನ್‌ ವಾಯುಪ್ರದೇಶದಲ್ಲಿ ಹಾರಾಟ ನಡೆಸಿದ ಇಸ್ರೇಲ್‌ನ ಯುದ್ಧವಿಮಾನಗಳು, ಕ್ಷಿಪಣಿಗಳಿಂದ ದಾಳಿ ನಡೆಸಿದವು. ಪ್ರತಿದಾಳಿ ನಡೆಸಿದ ಸಿರಿಯಾ ರಕ್ಷಣಾ ಪಡೆಗಳು, ಕ್ಷಿಪಣಿಗಳನ್ನು ಹೊಡೆದುರುಳಿಸಿದವು’ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

‘ಇರಾನ್‌ ಬೆಂಬಲಿತ ಉಗ್ರಗಾಮಿ ಸಂಘಟನೆ, ಲೆಬನಾನ್‌ ಮೂಲದ ಹಿಜ್‌ಬುಲ್‌ ತನ್ನ ಸದಸ್ಯರನ್ನು ಸಿರಿಯಾದಲ್ಲಿ ನಿಯೋಜನೆ ಮಾಡಿದೆ. ಸಂಘಟನೆಯ ಈ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿರುವುದಾಗಿ’ ಇಸ್ರೇಲ್‌ ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.