ಜೆರುಸಲೇಂ: ಹಮಾಸ್ ದಾಳಿ ನಿಗ್ರಹ ವೈಫಲ್ಯದ ಹೊಣೆಯನ್ನು ಹೊತ್ತುಕೊಂಡಿರುವ ಇಸ್ರೇಲ್ ಸೇನೆಯ ಗುಪ್ತಚರ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಅಹರಾನ್ ಹಲಿವಾ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
‘ಗುಪ್ತಚರ ಇಲಾಖೆ ನಮಗೆ ನೀಡಿದ್ದ ಜವಾಬ್ದಾರಿಯನ್ನು ನಾವು ಸರಿಯಾಗಿ ನಿಭಾಯಿಸಲಿಲ್ಲ. ನನ್ನ ಕರ್ತವ್ಯದ ಅವಧಿಯಲ್ಲಿ ಮಹತ್ತರ ಜವಾಬ್ದಾರಿಗಳು ನನ್ನ ಮೇಲಿತ್ತು ಎಂಬುವುದು ನನಗೆ ತಿಳಿದಿತ್ತು. ಹಮಾಸ್ ನಡೆಸಿದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಯುದ್ದ ಮುಗಿಯುವವರೆಗೂ ನಮ್ಮ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ಹವಾಲಿ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಸಲು ತನಿಖಾ ಸಂಸ್ಥೆ ರಚಿಸುವಂತೆ ಆಗ್ರಹಿಸಿದ ಹಲಿವಾ ಅವರು, ‘2023 ಅಕ್ಟೋಬರ್‌ನಲ್ಲಿ ನಡೆದ ದಾಳಿಯ ಕುರಿತಾಗಿ ಸಮಗ್ರ ತನಿಖೆ ನಡೆಸುವ ಮೂಲಕ ವೈಫಲ್ಯಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಬೇಕು’ ಎಂದು ತಿಳಿಸಿದ್ದಾರೆ.
ಹಲಿವಾ ಅವರ ರಾಜೀನಾಮೆಯ ಬಗ್ಗೆ ಖಚಿತಪಡಿಸಿದ ಇಸ್ರೇಲ್ ರಕ್ಷಣಾ ಪಡೆಯು, ‘ರಕ್ಷಣಾ ಸಚಿವರ ಅನುಮತಿಯೊಂದಿಗೆ ಹಲಿವಾ ವರ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು, ನೂತನ ಮುಖ್ಯಸ್ಥರು ನೇಮಕವಾದ ಬಳಿಕ ಹಲಿವಾ ನಿವೃತ್ತರಾಗಲಿದ್ದಾರೆ’ ಎಂದು ತಿಳಿಸಿದೆ.
ಇಸ್ರೇಲ್ ಸೇನೆಯ ಮೊದಲ ಜನರಲ್ ಆಗಿರುವ ಹಲಿವಾ ಅವರು 38 ವರ್ಷಗಳ ಸೇವೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.