ADVERTISEMENT

ಕ್ಷಿಪಣಿ ದಾಳಿ ಸಾಧ್ಯತೆ: ಸೌದಿ ವಾಯು ಪ್ರದೇಶ ಬಳಕೆ ಕೈಬಿಟ್ಟ ಇಸ್ರೇಲ್‌ ಪ್ರಧಾನಿ

ಏಜೆನ್ಸೀಸ್
Published 14 ಮಾರ್ಚ್ 2021, 12:44 IST
Last Updated 14 ಮಾರ್ಚ್ 2021, 12:44 IST
ಬೆಂಜಮಿನ್‌ ನೆತಾನ್ಯಾಹು
ಬೆಂಜಮಿನ್‌ ನೆತಾನ್ಯಾಹು   

ಜೆರುಸಲೇಂ: ಸೌದಿ ಅರೇಬಿಯಾ ವಾಯು ಪ್ರದೇಶದಲ್ಲಿ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸುವ ಸಾಧ್ಯತೆಯಿಂದಾಗಿ ಕಳೆದ ವಾರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ಪ್ರವಾಸ ಕೈಬಿಡಲಾಯಿತು ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು ತಿಳಿಸಿದ್ದಾರೆ.

ನೆರೆಯ ರಾಷ್ಟ್ರವಾದ ಜೋರ್ಡಾನ್‌ ತನ್ನ ವಾಯು ಪ್ರದೇಶದಲ್ಲಿ ಹಾರಾಟ ನಡೆಸದಂತೆ ಇಸ್ರೇಲ್‌ ಪ್ರಧಾನಿ ಅವರ ವಿಮಾನಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದೆ.

ಹೀಗಾಗಿ, ಸೌದಿ ಅರೇಬಿಯಾ ವಾಯು ಪ್ರದೇಶದ ಮೂಲಕ ತೆರಳಲು ಬೆಂಜಮಿನ್‌ ನೆತಾನ್ಯಾಹು ನಿರ್ಧರಿಸಿದ್ದರು. ಆದರೆ, ಕ್ಷಿಪಣಿ ದಾಳಿ ಸಾಧ್ಯತೆಯಿಂದ ಯುಎಇಗೆ ತೆರಳುವುದನ್ನು ಸ್ಥಗಿತಗೊಳಿಸಿದರು.

ADVERTISEMENT

‘ಸೌದಿ ಅರೇಬಿಯಾದ ವಾಯು ಪ್ರದೇಶದಲ್ಲಿಯೂ ಕಳೆದ ವಾರ ಸಮಸ್ಯೆ ಇತ್ತು’ ಎಂದು ನೆತಾನ್ಯಾಹು ಪ್ರತಿಕ್ರಿಯಿಸಿದ್ದಾರೆ.

ಹೌತಿ ಬಂಡುಕೋರರು ಇತ್ತೀಚೆಗೆ ನಡೆಸಿದ ದಾಳಿಯನ್ನು ಪ್ರಸ್ತಾಪಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಆದರೆ, ತಮ್ಮ ವಿಮಾನದ ಮೇಲೆ ಬಂಡುಕೋರರು ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ವಿವರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.