ADVERTISEMENT

ಇಸ್ರೇಲ್ ದಾಳಿ: ಗಾಜಾದಲ್ಲಿ 93 ಮಂದಿ ಸಾವು

ಏಜೆನ್ಸೀಸ್
Published 16 ಮೇ 2025, 12:37 IST
Last Updated 16 ಮೇ 2025, 12:37 IST
--
--   

ದೀರ್‌ ಅಲ್–ಬಲಾಹ್: ಇಸ್ರೇಲ್ ಸೇನೆಯು ಗಾಜಾಪಟ್ಟಿ ಮೇಲೆ ಶುಕ್ರವಾರ ಮತ್ತೆ ದಾಳಿ ನಡೆಸಿದ್ದು ಕನಿಷ್ಠ 93 ಮಂದಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಆಸ್ಪತ್ರೆಗಳು ತಿಳಿಸಿವೆ. 

ಗುರುವಾರ ತಡರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ದೀರ್ ಅಲ್–ಬಲಾಹ್‌ನ ಹೊರ ವಲಯ ಮತ್ತು ಖಾನ್ ಯೂನಿಸ್ ನಗರ ವ್ಯಾಪ್ತಿಯಲ್ಲಿ ದಾಳಿಗಳು ನಡೆದಿದ್ದು, 66 ಮೃತದೇಹಗಳನ್ನು ಇಂಡೊನೇಷಿಯನ್ ಆಸ್ಪತ್ರೆಗೆ ಕರೆತರಲಾಗಿದೆ. ಉಳಿದ 16 ಮೃತದೇಹಗಳನ್ನು ನಸ್ಸೆರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ದಾಳಿ ಕುರಿತು ಪ್ರತಿಕ್ರಿಯಿಸಿದ ಇಸ್ರೇಲ್, ‘ಗಾಜಾದಲ್ಲಿರುವ ಬಂಡುಕೋರರನ್ನು ಗುರಿಯಾಗಿಸಿ ನಾವು ಕಾರ್ಯಾಚರಣೆ ಮುಂದುವರಿಸಿದ್ದೇವೆ. ಕ್ಷಿಪಣಿ ಪೋಸ್ಟ್‌ಗಳು, ಸೇನಾ ಮೂಲಸೌಕರ್ಯ ಸೇರಿ 150 ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ. ಉತ್ತರ ಗಾಜಾದಲ್ಲಿ ಹಲವು ಬಂಡುಕೋರರನ್ನು ಹತ್ಯೆ ಮಾಡಿದ್ದೇವೆ’ ಎಂದಿದೆ. ಇಸ್ರೇಲ್ ದಾಳಿಯಿಂದಾಗಿ ಜಬಲಿಯಾ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಜನರು ತಮ್ಮ ವಸ್ತುಗಳನ್ನು ಕತ್ತೆಗಳು, ಕಾರುಗಳ ಮೇಲೆ ಹೇರಿಕೊಂಡು ಮತ್ತು ಹೊತ್ತುಕೊಂಡು ಸುರಕ್ಷಿತ ತಾಣಗಳತ್ತ ಹೊರಟಿರುವುದು ಕಂಡುಬಂದಿದೆ. 

ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮಕ್ಕೆ ನಾಂದಿ ಹಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇಸ್ರೇಲ್ ಮಧ್ಯಪ್ರಾಚ್ಯದಿಂದ ದೂರ ಉಳಿದ ಕಾರಣ ನಿರೀಕ್ಷೆ ಹುಸಿಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.