ತ್ರಿವರ್ಣ ಧ್ವಜ
ಜೆರುಸಲೇಂ: ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಿ ತಪ್ಪಾದ ನಕ್ಷೆಯನ್ನು 'ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಇಸ್ರೇಲ್ ಸೇನೆಯು ಶನಿವಾರ ಭಾರತೀಯರ ಕ್ಷಮೆ ಯಾಚಿಸಿದೆ.
ಇರಾನ್ ವಿರುದ್ಧದ ಕಾರ್ಯಾಚರಣೆ ಭಾಗವಾಗಿ ಶುಕ್ರವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಇಸ್ರೇಲ್ ರಕ್ಷಣಾ ಪಡೆಯು (ಐಡಿಎಫ್), ಅದರ ಜತೆಗೆ ಹಂಚಿಕೊಂಡಿದ್ದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದೆ ಎಂದು ತೋರಿಸಲಾಗಿತ್ತು. ಇದಕ್ಕೆ ಭಾರತದ ಸಾಮಾಜಿಕ ಜಾಲತಾಣ ಬಳಕೆದಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಶನಿವಾರ ಕ್ಷಮೆಯಾಚಿಸಿರುವ ‘ಐಡಿಎಫ್’ ಈ ನಕ್ಷೆಯು ಗಡಿಯನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗಿದೆ. ಈ ಚಿತ್ರದಿಂದ ಉಂಟಾದ ಯಾವುದೇ ಅಪರಾಧಕ್ಕೆ ಕ್ಷಮೆ ಯಾಚಿಸುತ್ತೇವೆ’ ಎಂದು ‘ಎಕ್ಸ್’ನಲ್ಲಿ ಹೇಳಿದೆ.
‘ಇರಾನ್ ಜಾಗತಿಕ ಬೆದರಿಕೆ’ ಎಂಬ ಶೀರ್ಷಿಕೆಯಡಿ ಇರಾನ್‌ನ ಕ್ಷಿಪಣಿ ದಾಳಿಯ ವ್ಯಾಪ್ತಿಯನ್ನು ತೋರಿಸುವ ಇನ್ಫೋಗ್ರಾಫಿಕ್ ಅನ್ನು ‘ಐಡಿಎಫ್’ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು.
‘ಭಾರತ ಯಾಕೆ ತಟಸ್ಥವಾಗಿ ಉಳಿದಿದೆ ಎನ್ನುವುದು ಈಗ ನಿಮಗೆ ಈಗ ಅರ್ಥ ಆಗಿರಬೇಕು. ರಾಜತಾಂತ್ರಿಕ ವಿಷಯದಲ್ಲಿ ಯಾರೂ ನಿಮ್ಮ ನಿಜವಾದ ಸ್ನೇಹಿತರಲ್ಲ’ ಎಂದು ವ್ಯಕ್ತಿಯೊಬ್ಬರು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.