ADVERTISEMENT

ಇಟಲಿಯಲ್ಲಿ ಒಂದೇ ದಿನ 60 ಸಾವಿರ ಮಂದಿಗೆ ಸೋಂಕು

ರಾಯಿಟರ್ಸ್
Published 21 ಮಾರ್ಚ್ 2022, 3:42 IST
Last Updated 21 ಮಾರ್ಚ್ 2022, 3:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಿಲಾನ್: ಇಟಲಿಯಲ್ಲಿ ಭಾನುವಾರ ಒಂದೇ ದಿನ 60,415 ಮಂದಿ ಕೊರೊನಾ ವೈರಸ್ ದೃಢಪಟ್ಟಿದ್ದು, 95 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಶನಿವಾರ ದಾಖಲಾದ 74,024ಕ್ಕಿಂತ ಭಾನುವಾರ ಕೋವಿಡ್ ಸಂಖ್ಯೆ ಇಳಿಕೆಯಾಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಶನಿವಾರ 85 ಮಂದಿಯನ್ನು ಕೋವಿಡ್ ಬಲಿಪಡೆದಿತ್ತು.

ಇದರೊಂದಿಗೆ ಈವರೆಗೆ ಇಟಲಿಯಲ್ಲಿ ಕೊರೊನಾ ಮಹಾಮಾರಿಗೆ 1,57,785 ಮಂದಿ ಬಲಿಯಾದಂತಾಗಿದೆ. ಬ್ರಿಟನ್ ಬಳಿಕ ಯುರೋಪ್ ದೇಶಗಳಲ್ಲೇ ಅತಿಹೆಚ್ಚು ಸಾವಿನ ಸಂಖ್ಯೆ ಇಟಲಿಯಲ್ಲಿ ದೃಢಪಟ್ಟಿದೆ. ಅಲ್ಲದೆ ದೇಶದಲ್ಲಿ ಒಟ್ಟು 1.3 ಕೋಟಿ ಮಂದಿಗೆ ಸೋಂಕು ವ್ಯಾಪಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT