ADVERTISEMENT

ಪಕ್ಷದ ಅಧ್ಯಕ್ಷ ಚುನಾವಣೆ: ಗೆಲ್ಲುವ ಉತ್ಸಾಹದಲ್ಲಿ ಅಬೆ

ಗೆದ್ದರೆ ಮತ್ತೆ ಮೂರು ವರ್ಷ ಪ್ರಧಾನಿಯಾಗಿ ಮುಂದುವರಿಕೆ

ರಾಯಿಟರ್ಸ್
Published 10 ಸೆಪ್ಟೆಂಬರ್ 2018, 14:14 IST
Last Updated 10 ಸೆಪ್ಟೆಂಬರ್ 2018, 14:14 IST
   

ಟೋಕಿಯೊ:ಜಪಾನ್‌ನ ಆಡಳಿತಾರೂಢ‘ಲಿಬರಲ್ ಡೆಮಾಕ್ರಟಿಕ್ ಪಕ್ಷ’ದ (ಎಲ್‌ಡಿಪಿ) ಅಧ್ಯಕ್ಷ ಸ್ಥಾನಕ್ಕೆ ಇದೇ 20ರಂದು ಚುನಾವಣೆ ನಡೆಯಲಿದೆ. ಪ್ರಧಾನಿ ಶಿಂಜೊ ಅಬೆ ಅವರು ಪ್ರಬಲ ಪ್ರತಿಸ್ಪರ್ಧಿ ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಬಾ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಅಬೆ ಅವರು ಅಧಿಕಾರದಲ್ಲಿ ಮುಂದುವರಿದರೆ,ಸಂವಿಧಾನಕ್ಕೆ ತಿದ್ದುಪಡಿ ತರುವುದಾಗಿ ಹೇಳಿದ್ದಾರೆ. ಸಂವಿಧಾನ ಬದಲಾವಣೆ ಸಂಬಂಧ ಪಕ್ಷವು ಈ ವರ್ಷದ ಕೊನೆಯ ಹೊತ್ತಿಗೆ ಡಯಟ್‌ಗೆ (ಸಂಸತ್) ಪ್ರಸ್ತಾವನೆ ಸಲ್ಲಿಸಲಿದೆ ಎಂದಿದ್ದಾರೆ.

ಸಾಮಾನ್ಯವಾಗಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದವರು ಪ್ರಧಾನಿಯಾಗುತ್ತಾರೆ.ಜಯ ದೊರೆತರೆ ಅಬೆ ಪ್ರಧಾನಿಯಾಗಿ ಮುಂದುವರಿಯುವ ಜೊತೆಗೆ ಮತ್ತೆ ಮೂರು ವರ್ಷಗಳ ಕಾಲ ಪಕ್ಷದ ಮೇಲೆ ಹಿಡಿತ ಸಾಧಿಸಲಿದ್ದಾರೆ. ಸಂಸತ್ತಿನ ಮೇಲೆ ಎಲ್‌ಡಿಪಿ ನೇತೃತ್ವದ ಮೈತ್ರಿಕೂಟದ ಹಿಡಿತವೂ ಸಾಧ್ಯವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.