ADVERTISEMENT

ಲೈಂಗಿಕ ದೌರ್ಜನ್ಯ ಕೇಸ್ ಅಪರಾಧಿ ಜೆಫ್ರಿ ಫೈಲ್‌ಗಳು ನಾಪತ್ತೆ! ಟ್ರಂಪ್ ಕಿತಾಪತಿ?

ಏಜೆನ್ಸೀಸ್
Published 21 ಡಿಸೆಂಬರ್ 2025, 14:41 IST
Last Updated 21 ಡಿಸೆಂಬರ್ 2025, 14:41 IST
ಜೆಫ್ರಿ ಎಫ್‌ಸ್ಟೈನ್‌
ಜೆಫ್ರಿ ಎಫ್‌ಸ್ಟೈನ್‌   

ನ್ಯೂಯಾರ್ಕ್: ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಫ್‌ಸ್ಟೈನ್‌ಗೆ ಸಂಬಂಧಿಸಿದ 16 ದಾಖಲೆಗಳು ಅಮೆರಿಕ ನ್ಯಾಯಾಂಗ ಇಲಾಖೆಯ ವೆಬ್‌ಸೈಟ್‌ನಿಂದ ದಿಢೀರ್ ಕಣ್ಮರೆಯಾಗಿರುವುದು ಚರ್ಚೆಗೆ ಕಾರಣವಾಗಿದೆ.

ಎಫ್‌ಸ್ಟೈನ್‌ ಜೊತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಮೆಲನಿ ಟ್ರಂ‌ಪ್‌ ಮತ್ತು ಎಫ್‌ಸ್ಟೈನ್‌ ಆಪ್ತ ಘಿಸ್ಲೈನ್‌ ಮಾಕ್ಸ್‌ವೆಲ್‌ ಅವರು ಇರುವ ಚಿತ್ರ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ವೆಬ್‌ಸೈಟ್‌ನಲ್ಲಿ ಶುಕ್ರವಾರ ಪೋಸ್ಟ್‌ ಮಾಡಲಾಗಿತ್ತು ಆದರೆ ಶನಿವಾರ ಅದನ್ನು ಅಳಿಸಿಹಾಕಲಾಗಿದೆ. 

ದಾಖಲೆಗಳನ್ನು ಯಾಕೆ ಅಳಿಸಿ ಹಾಕಲಾಗಿದೆ? ಮತ್ತು ಇದು ಉದ್ದೇಶಪೂರ್ವಕವಾಗಿ ಮಾಡಿದ ಕಾರ್ಯವೇ? ಎಂಬ ಬಗ್ಗೆ ನ್ಯಾಯಾಂಗ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ಕಡತಗಳನ್ನು ತೆಗೆದುಹಾಕಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಸಾರ್ವಜನಿಕರಿಗೆ ಈ ಬಗ್ಗೆ ಯಾಕೆ ಮಾಹಿತಿ ನೀಡಿಲ್ಲ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ವೆಬ್‌ಸೈಟ್‌ನಲ್ಲಿ ಅಳಿಸಿಹಾಕಲಾಗಿರುವ ಟ್ರಂಪ್ ಚಿತ್ರವನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಡೆಮಾಕ್ರಟಿಕ್ ಸದಸ್ಯರು, ‘ಏನನ್ನು ಮುಚ್ಚಿಡಲಾಗುತ್ತಿದೆ? ಅಮೆರಿಕದ ಜನತೆಗಾಗಿ ನಾವು ಪಾರದರ್ಶಕತೆಯನ್ನು ಬಯಸುತ್ತೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.