ADVERTISEMENT

ಜೋ ಬೈಡನ್‌ ನೇರ ನಿಷ್ಠುರ ಮಾತುಗಾರ: ಶ್ವೇತಭವನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 13:52 IST
Last Updated 23 ಜೂನ್ 2022, 13:52 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌:‘ಮಾನವೀಯ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದಂತಹ ಮಹತ್ವದ ವಿಷಯಗಳಲ್ಲಿ ವಿಶ್ವ ನಾಯಕರೊಂದಿಗೆ ನೇರ ಮಾತುಕತೆ ನಡೆಸಲು ಅಧ್ಯಕ್ಷ ಜೋ ಬೈಡನ್‌ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಅವರು ಇಂತಹ ವಿಚಾರಗಳಲ್ಲಿ ನೇರ ನಿಷ್ಠುರ ಮಾತುಗಾರ’ ಎಂದು ಶ್ವೇತಭವನದ ವಕ್ತಾರರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರವಾದಿ ಮೊಹಮ್ಮದ್ ವಿರುದ್ಧ ಸದ್ಯಅಮಾನತುಗೊಂಡಿರುವ ಇಬ್ಬರು ಬಿಜೆಪಿಯ ಪದಾಧಿಕಾರಿಗಳು ನೀಡಿದ ವಿವಾದಾತ್ಮಕ ಹೇಳಿಕೆಗಳಿಂದ ಭಾರತದಲ್ಲಿ ಪ್ರತಿಭಟನೆಗಳು ಹಿಂಸೆಗೆ ತಿರುಗಿವೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬೈಡನ್ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ವಿಷಯ ಪ್ರಸ್ತಾಪಿಸುತ್ತಾರೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಈ ಪ್ರತಿಕ್ರಿಯೆ ನೀಡಿದರು.

ಭಾರತದಲ್ಲಿ ಹಿಂಸಾಚಾರ ಸಂಬಂಧ ಅಲ್ಲಿನ ಅಧಿಕಾರಿಗಳು ಜನರ ಮನೆಗಳನ್ನು ನೆಲಸಮ ಮಾಡುತ್ತಿರುವುದಕ್ಕೆ ಶ್ವೇತಭವನದ ಪ್ರತಿಕ್ರಿಯೆ ಏನು? ಮುಂದಿನ ತಿಂಗಳು ಇಸ್ರೇಲ್‌ಪ್ರವಾಸ ಕೈಗೊಳ್ಳಲಿರುವ ಬೈಡನ್‌ ಅವರು ಐ2ಯು2 ಶೃಂಗಸಭೆಯಲ್ಲಿ ಭಾರತದ ಅಲ್ಪಸಂಖ್ಯಾತಮುಸ್ಲಿಮರ ಹಕ್ಕಗಳನ್ನು ರಕ್ಷಿಸುವಂತೆ ಮೋದಿಯವರನ್ನು ಒತ್ತಾಯಿಸಲಿದ್ದಾರೆಯೇ ಎಂದುಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಜೀನ್ ಪಿಯರ್ನೇರ ಉತ್ತರ ನೀಡದೇ ನುಣುಚಿಕೊಂಡರು.

ADVERTISEMENT

‘ಭೇಟಿಯಲ್ಲಿನ ಕಾರ್ಯಸೂಚಿ ಮತ್ತು ಅವರ ಮಾತುಕತೆಯ ಬಗ್ಗೆ ಈಗಲೇ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ.ಆದಾಗ್ಯೂ, ಮಾನವೀಯ ಹಕ್ಕುಗಳು, ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ವಿಶ್ವ ನಾಯಕರೊಂದಿಗೆ ಮಾತನಾಡಲು ಬೈಡನ್‌ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಬೈಡನ್‌ ಅವರುನೇರ ಮಾತುಗಾರ. ಈ ಹಿಂದೆ ಅವರುಮಾಡಿರುವ ಕೆಲಸವೂ ಇದನ್ನೇ ಹೇಳುತ್ತದೆ’ಎಂದರು.

ಭಾರತ, ಇಸ್ರೇಲ್‌, ಯುಎಇ ಹಾಗೂ ಅಮೆರಿಕ ಹೊಸದಾಗಿ ರಚಿಸಿಕೊಂಡಿರುವ ಐ2ಯು2 ಗುಂಪಿನಮೊದಲ ವರ್ಚುವಲ್ ಶೃಂಗಸಭೆ ಜುಲೈನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.