ADVERTISEMENT

ಕಮಲಾ ಹ್ಯಾರಿಸ್ ಉತ್ತಮ ಆಯ್ಕೆ: ಹಿಲರಿ ಕ್ಲಿಂಟನ್‌

ಪಿಟಿಐ
Published 20 ಆಗಸ್ಟ್ 2020, 7:42 IST
Last Updated 20 ಆಗಸ್ಟ್ 2020, 7:42 IST
ಹಿಲರಿ ಕ್ಲಿಂಟನ್
ಹಿಲರಿ ಕ್ಲಿಂಟನ್   

ನ್ಯೂಯಾರ್ಕ್: 'ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾದೇವಿ ಹ್ಯಾರಿಸ್ ಅವರನ್ನು ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡುವ ಮೂಲಕ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಸರಿಯಾದ ಆಯ್ಕೆಯನ್ನೇ ಮಾಡಿದ್ದಾರೆ' ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಶ್ಲಾಘಿಸಿದ್ದಾರೆ.

ಇಲ್ಲಿ ಆನ್‌ಲೈನ್‌ ಮೂಲಕ ನಡೆದ ಡೆಮಾಕ್ರಟಿಕ್‌ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ’ಅಮೆರಿಕದ ನಾಗರಿಕರುಡೆಮಾಕ್ರಟಿಕ್ ಪಕ್ಷಕ್ಕೆ ಮತ ಹಾಕುವ ಮೂಲಕ, ಈಗ ದುಃಸ್ಥಿತಿಗೆ ಕೊಂಡೊಯ್ದಿರುವ ದೇಶವನ್ನು, ಉತ್ತಮ ಸ್ಥಿತಿಗೆ ವಾಪಸ್ ತರಲು ನೆರವಾಗಬೇಕು’ ಎಂದು ಹೇಳಿದ್ದಾರೆ.

‘ಈ ಬಾರಿಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯ ರಾಜಕೀಯ ನಿಲುವನ್ನು ಲಘುವಾಗಿ ಪರಿಗಣಿಸಬೇಡಿ’ ಎಂದು ಮತದಾರಲ್ಲಿ ಮನವಿ ಮಾಡಿದ ಅವರು, ’ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು’ ಎಂದು ಹಿಲರಿ ಕ್ಲಿಂಟನ್‌ ಒತ್ತಾಯಿಸಿದರು.

ADVERTISEMENT

‘ನಾವೆಲ್ಲ ಒಟ್ಟಾಗಿ ಬೈಡನ್ – ಕಮಲಾ ಹ್ಯಾರಿಸ್ ತಂಡವನ್ನು ಆಯ್ಕೆ ಮಾಡಿದರೆ, ನಮ್ಮ ಒಗ್ಗಟ್ಟು ಬಲಯುತವಾಗುತ್ತದೆ. ಆಗ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.