ADVERTISEMENT

ಓಮೈಕ್ರಾನ್ ವಿರುದ್ಧ ಜಾನ್ಸನ್ ಲಸಿಕೆಯ ಬೂಸ್ಟರ್ ಡೋಸ್ ಶೇ 85 ಪರಿಣಾಮಕಾರಿ: ವರದಿ

ರಾಯಿಟರ್ಸ್
Published 14 ಜನವರಿ 2022, 10:46 IST
Last Updated 14 ಜನವರಿ 2022, 10:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೋಹಾನ್ಸ್‌ಬರ್ಗ್: ‘ಜಾನ್ಸನ್ ಆ್ಯಂಡ್ ಜಾನ್ಸನ್’ ಕೋವಿಡ್–19 ಲಸಿಕೆಯ ಬೂಸ್ಟರ್ ಡೋಸ್ ಓಮೈಕ್ರಾನ್ ವಿರುದ್ಧ 1ರಿಂದ 2 ತಿಂಗಳುಗಳ ವರೆಗೆ ಶೇ 85ರಷ್ಟು ಪರಿಣಾಮಕಾರಿ ಎಂದು ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಶೋಧನಾ ಮಂಡಳಿ (ಎಸ್‌ಎಎಂಆರ್‌ಸಿ) ಮುಖ್ಯಸ್ಥ ಗ್ಲೆಂಡಾ ಗ್ರೆ ತಿಳಿಸಿದ್ದಾರೆ.

ಕೋವಿಡ್ ನಾಲ್ಕನೇ ಅಲೆಯ ಬಗ್ಗೆ ದಕ್ಷಿಣ ಆಫ್ರಿಕಾ ಸರ್ಕಾರದ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ನೀಡುವಾಗ ಗ್ರೆ ಅವರು ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಓಮೈಕ್ರಾನ್‌ನಿಂದಾಗಿ ಕೋವಿಡ್ ನಾಲ್ಕನೇ ಅಲೆ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.