ADVERTISEMENT

ಜಾನ್ಸನ್ & ಜಾನ್ಸನ್ ಕಂಪೆನಿಯ ಕೋವಿಡ್‌–19 ಲಸಿಕೆ ಪ್ರಯೋಗ ಸ್ಥಗಿತ

ಏಜೆನ್ಸೀಸ್
Published 13 ಅಕ್ಟೋಬರ್ 2020, 2:34 IST
Last Updated 13 ಅಕ್ಟೋಬರ್ 2020, 2:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕ ಮೂಲದ ಜಾನ್ಸನ್ ಮತ್ತು ಜಾನ್ಸನ್ (ಜೆ & ಜೆ) ಕಂಪೆನಿ ತಯಾರಿಸಿರುವ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಜಾನ್ಸನ್ ಕಂಪೆನಿ ತಯಾರಿಸಿರುವ ಲಸಿಕೆಯ ಮೂರನೇ ಹಾಗೂ ಅಂತಿಮ ಹಂತದಲ್ಲಿ60 ಸಾವಿರ ಜನರ ಮೇಲೆ ಕ್ಲಿನಿಕಲ್‌ ಪರೀಕ್ಷೆ ನಡೆಸುತ್ತಿತ್ತು. ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟವರಿಗೆ ವಿವರಿಸಲಾಗದ ಕಾಯಿಲೆಗಳು ಗೋಚರಿಸಿರುವುದರಿಂದ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಪ್ರಯೋಗಕ್ಕೆ ಒಳಗಾದವರಿಗೆ ಡೋಸೆಜ್‌ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

‘ವ್ಯಕ್ತಿಗೆ ಒಮ್ಮೆ ನೀಡಿದರೆ ಸೋಂಕು ಬಾರದಂತೆ ತಡೆಯುವ ಲಸಿಕೆಯನ್ನು(ಸಿಂಗಲ್‌ ಶಾಟ್‌ ವ್ಯಾಕ್ಸಿನ್‌) ಜಾನ್ಸ್‌ನ್‌ ಕಂಪನಿ ಅಭಿವೃದ್ಧಿಪಡಿಸಿತ್ತು. ಲಸಿಕೆಯ ಪ್ರಯೋಗಕ್ಕೆ ಒಳಗಾದವರಿಗೆ ವಿವರಿಸಲಾರದ ಕಾಯಿಲೆಗಳು ಗೋಚರಿಸಿರುವುದರಿಂದ ಅ.12ರಿಂದ ಪ್ರಾಯೋಗಿಕ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಲಸಿಕೆಯ ಪ್ರಯೋಗ ಮೂರನೇ ಹಂತದಲ್ಲಿ ಇತ್ತು. ಡಿಸೆಂಬರ್‌ ಅಂತ್ಯದವರೆಗೂಪ್ರಾಯೋಗಿಕ ಪರೀಕ್ಷೆಯನ್ನು ನಡೆಸಬೇಕಿತ್ತು ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.