ADVERTISEMENT

ಚೀನಾ ಭೂಕಂಪ| 11 ಮಂದಿ ಸಾವು, 122 ಜನರಿಗೆ ಗಾಯ

ರಿಕ್ಟರ್‌ ಮಾಪಕದಲ್ಲಿ 6ರಷ್ಟು ತೀವ್ರತೆ ದಾಖಲು

ಏಜೆನ್ಸೀಸ್
Published 18 ಜೂನ್ 2019, 19:01 IST
Last Updated 18 ಜೂನ್ 2019, 19:01 IST
ಅವಷೇಶಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ರಕ್ಷಣಾ ಪಡೆ
ಅವಷೇಶಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ರಕ್ಷಣಾ ಪಡೆ   

ಬೀಜಿಂಗ್‌: ಚೀನಾದ ನೈರುತ್ಯ ಭಾಗದಲ್ಲಿರುವ ಸಿಚುವಾನ್‌ ಪ್ರದೇಶದಲ್ಲಿ ಸೋಮವಾರ ರಾತ್ರಿ ಭೂಕಂಪ ಸಂಭವಿಸಿದ್ದು, 11 ಮಂದಿ ಮೃತಪಟ್ಟು, 122 ಜನರಿಗೆ ಗಾಯಗಳಾಗಿವೆ.

ಮೊದಲ ಬಾರಿಗೆ ಬೆಳಿಗ್ಗೆ 4.25ಕ್ಕೆ (ಭಾರತೀಯ ಕಾಲಮಾನ) ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 6ರಷ್ಟು ತೀವ್ರತೆ ದಾಖಲಾಗಿದೆ. ಮಂಗಳವಾರ ಬೆಳಿಗ್ಗೆ ಎರಡನೇ ಬಾರಿಗೆ ಭೂಕಂಪ ಸಂಭವಿಸಿದ್ದು, 5.3ರಷ್ಟು ತೀವ್ರತೆ ದಾಖಲಾಗಿದೆ.

ತುರ್ತು ನಿರ್ವಹಣಾ ಸಚಿವಾಲಯ ಮತ್ತು ಪ್ರಾದೇಶಿಕ ತುರ್ತು ನಿರ್ವಹಣಾ ಇಲಾಖೆಯು ‘ತುರ್ತು ಪ್ರತಿಕ್ರಿಯೆ’ ಸೌಲಭ್ಯವನ್ನು ಪ್ರಾರಂಭಿಸಿದೆ. ವಿಪತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಸಹಕಾರಿಯಾಗುವಂತೆಸಚಿವಾಲಯವುಘಟನಾ ಸ್ಥಳಕ್ಕೆಕಾರ್ಯಪಡೆಯನ್ನು ಕಳುಹಿಸಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ADVERTISEMENT

ಭೂಕಂಪದಿಂದ ತೊಂದರೆಗೊಳಗಾದವರಿಗೆ 5,000 ತಾತ್ಕಾಲಿಕ ಬಿಡಾರ ನಿಮಿರ್ಸಿದೆ, ಅಲ್ಲದೆ 10 ಸಾವಿರ ಹಾಸಿಗೆ ಹಾಗೂ 20 ಸಾವಿರ ಹೊದಿಕೆಗಳನ್ನು ಸರ್ಕಾರ ಪೂರೈಸಿದೆ.

63 ಅಗ್ನಿ ಶಾಮಕ ವಾಹನ, 302 ಅಗ್ನಿ ಶಾಮಕದಳ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ತುರ್ತಾಗಿ ಕಳುಹಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಭೂಕಂಪ ಸಂಭವಿಸಿದ ಪ್ರದೇಶದಿಂದ ಹತ್ತಿರದಲ್ಲಿರುವಶಾಂಘೈ ಹಾಗೂ ಮೈಡಾಂಗ್‌ ನಗರಗಳ ದೂರವಾಣಿ ಸಂಪರ್ಕ ‌ಕಡಿತಗೊಂಡಿದೆ. ಸೋಮವಾರದಿಂದಲೂ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಪಟ್ಟಣಗಳು ಸಂಪೂರ್ಣ ನಾಶವಾಗಿದೆ. ಜೊತೆಗೆ, ಭೂಕಂಪದಿಂದ ಸಿಚುವಾನ್‌ ತಲುಪುವ ಹೆದ್ದಾರಿಗಳಲ್ಲಿ ಬಿರುಕು ಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.