ADVERTISEMENT

ಕನ್ನಡ ಕಹಳೆ-2: ಜರ್ಮನಿಯಲ್ಲಿ ನಾಳೆಗೊಂದು ಭರವಸೆಯ ಸಾಹಿತ್ಯ ಪರಂಪರೆ

Published 26 ಡಿಸೆಂಬರ್ 2022, 13:58 IST
Last Updated 26 ಡಿಸೆಂಬರ್ 2022, 13:58 IST
ಸಿರಿಗನ್ನಡಕೂಟದ ಎರಡನೇ ಆವೃತ್ತಿಯ ‘ಕನ್ನಡ ಕಹಳೆ-ಸಾಹಿತ್ಯ ಸಂಜೆ‘ ಕಾರ್ಯಕ್ರಮ
ಸಿರಿಗನ್ನಡಕೂಟದ ಎರಡನೇ ಆವೃತ್ತಿಯ ‘ಕನ್ನಡ ಕಹಳೆ-ಸಾಹಿತ್ಯ ಸಂಜೆ‘ ಕಾರ್ಯಕ್ರಮ   

ಮ್ಯೂನಿಕ್: ಇಲ್ಲಿನ ಸಿರಿಗನ್ನಡಕೂಟದ ಎರಡನೇ ಆವೃತ್ತಿಯ ‘ಕನ್ನಡ ಕಹಳೆ-ಸಾಹಿತ್ಯ ಸಂಜೆ‘ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಜರ್ಮನಿಯ ನಾನಾ ರಾಜ್ಯಗಳಲ್ಲಿನ ಕನ್ನಡಿಗರು ಮಾತ್ರವಲ್ಲದೇನೆದರ್ಲ್ಯಾಂಡ್ ಮತ್ತು ಇಂಗ್ಲೆಂಡ್‌ ದೇಶದಿಂದಲೂ ನೂರಾರು ಜನರು ಆನ್‌ಲೈನ್‌ ಮೂಲಕ ಭಾಗವಹಿಸಿದ್ದರು. ಯೂಟ್ಯೂಬ್‌ನಲ್ಲಿಈ ಕಾರ್ಯಕ್ರಮ ನೇರ ಪ್ರಸಾರವಾಯಿತು.

ಚೈತ್ರಾ ಅವರು ‘ಗರ್ಭ‘,ವಿದ್ಯಾ ಯೋಗೀಶ ಅವರು ‘ಹುಡುಗರ ಪಾಡು‘, ರೇಶ್ಮಾ ಮೋರ್ಟು ಅವರು ‘ವಲಸೆ‘, ಕಮಲಾಕ್ಷ ಎಚ್.ಎ ಅವರು ‘ಪ್ರೀತಿಯ ಹೊನಲು‘, ಶಾಲಿನಿ ಶಿವಕುಮಾರ್ ರವರು ‘ಮುಖವಾಡ‘, ಸುನೀಲ್ ದೇಶಪಾಂಡೆ ಅವರು ‘ನೀನ್ಯಾರು, ನಾನ್ಯಾರು‘ ಮತ್ತು ‘ಬಂಧನ‘ ಎಂಬ ಕವನಗಳನ್ನು ವಾಚಿಸಿದರು.

ADVERTISEMENT

ಫ್ರಾಂಕ್‌ಫರ್ಟ್ ನಿಂದ ಶೋಭಾ ಚೌಹಾಣ್ ಅವರು ‘ವಿದಾಯ‘, ಇಂಗ್ಲೆಂಡ್‌ನಿಂದ ಹನೀಫ್ ಅವರು ‘ಬದುಕುವ ಕಲಿಯಿರಿ‘ ಎಂಬ
ಕವನವಗಳನ್ನು ವಾಚಿಸಿದರು.

ನೆದರ್ಲ್ಯಾಂಡ್ ನಿಂದ ಶ್ರೀನಾಥ ಗರದೂರು ಚಿದಂಬರ ಅವರು ‘ರಹಸ್ಯ ರಾತ್ರಿಗಳು‘ ಎಂಬ ಸಣ್ಣ ಕಥೆಯನ್ನು ಹಾಗೂ ಅರವಿಂದ ಸುಬ್ರಮಣ್ಯ ಅವರು ‘ನಮಸ್ಕಾರ, ನಮಸ್ಕಾರ, ನಮಸ್ಕಾರ‘ ಎಂಬ ಲಲಿತ ಪ್ರಬಂಧವನ್ನು ವಾಚಿಸಿದರು.

ತ್ರೈಮಾಸಿಕ ಪತ್ರಿಕೆ ‘ಹೊನ್ನುಡಿ‘ ಬಿಡುಗಡೆ

ಹೊನ್ನುಡಿ

ಇದೇ ಕಾರ್ಯಕ್ರಮದಲ್ಲಿ ಸಿರಿಗನ್ನಡ ಕೂಟ ಮಂಡಳಿಯ ಸದಸ್ಯರಾದ ಅರವಿಂದ ಸುಬ್ರಮಣ್ಯರವರು ಸಿರಿಗನ್ನಡಕೂಟದ
ಬಹುವರ್ಷದ ಕನಸಾದ ತ್ರೈಮಾಸಿಕ ಪತ್ರಿಕೆ ‘ಹೊನ್ನುಡಿ‘ಯನ್ನು ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷರಾದ ಕಾರ್ತಿಕ್
ಮಂಜುನಾಥ ಅವರು ‘ಹೊನ್ನುಡಿ‘ಯನ್ನು ಉದ್ದೇಶಿಸಿ ಮಾತನಾಡಿದರು.

ಈ ತ್ರೈಮಾಸಿಕ ಪತ್ರಿಕೆಯು ಅನಿವಾಸಿ ಕನ್ನಡಿಗರ ನುಡಿ. ಇದು ಬರಿ ಸಿರಿಗನ್ನಡ ಕೂಟಕ್ಕಾಗಲಿ, ಮ್ಯೂನಿಕ್ ಅಥವಾ ಜರ್ಮನಿಗೆ ಸೀಮಿತವಲ್ಲ. ಎಲ್ಲಾ ಅನಿವಾಸಿ ಕನ್ನಡಿಗರ ಕಲಾತ್ಮಕ ಹವ್ಯಾಸಕ್ಕೆ ವೇದಿಕೆಯನ್ನು ಕಲ್ಪಿಸಿಕೊಡುವಂತಹದ್ದು ಎಂದರು.

ಹವ್ಯಾಸಿ ಬರಹಗಾರರ ಪ್ರವಾಸ ಕಥನಗಳು,ದಾರಾವಾಹಿಗಳು, ಕತೆ, ಕವನಗಳು, ಅಂಕಣಗಳು, ವ್ಯಂಗ್ಯ ಚಿತ್ರಗಳು, ಚಿತ್ರಕಲೆ, ಛಾಯಚಿತ್ರ, ಪದಬಂಧ ಸೇರಿದಂತೆ ಇತರೆ ಸಾಹಿತ್ಯ ಪ್ರಕಾರಗಳನ್ನು ಓದಿ ಮತ್ತು ಬರೆಯುವ ಮೂಲಕ ಎಲ್ಲರೂ ಸದುಪಯೋಗ ಪಡಿಸಿಕೊಳ್ಳುಬೇಕೆಂದು ಕಾರ್ತಿಕ್‌ ಮಂಜುನಾಥ್‌ ಹೇಳಿದರು.

ಅರವಿಂದ ಸುಬ್ರಮಣ್ಯ ಅವರು ಸಿರಿಗನ್ನಡಕೂಟದ ‘ಮನನ ಮಥನ ನಮನ‘ ವೇದಿಕೆಯ ‘ನಮನ‘ ವಿಭಾಗಕೆ ಚಾಲನೆ ನೀಡಿ ಮಾತನಾಡಿದರು. ಯುರೋಪಿನ ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಕತೆ, ಕಾದಂಬರಿ ಓದುವುದನ್ನು ಮತ್ತಷ್ಚು ಜಾಗೃತಗೊಳಿಸಲು
ಮತ್ತು ಸಾಹಿತ್ಯಾಸಕ್ತ ಓದುಗರಿಗೆ ಕತೆ ಕಾದಂಬರಿಗಳ ವಿಮರ್ಶೆಗೆ ನಮನ ಒಂದು ವೇದಿಕೆಯಾಗಿದೆ ಎಂದು ತಿಳಿಸಿದರು.

2023ರ ಕನ್ನಡ ರಾಜ್ಯೋತ್ಸವಕ್ಕೆ ಕತೆ ಮತ್ತು ಕವನ ಸಂಕಲನಗಳ ಬಿಡುಗಡೆ

2023ನೇ ಕನ್ನಡ ರಾಜ್ಯೋತ್ಸವಕ್ಕೆ ನಮ್ಮ ಸಿರಿಗನ್ನಡ ಕೂಟದ ವತಿಯಿಂದ ಕವನ ಮತ್ತು ಕಥಾ ಸಂಕಲನ ಬಿಡುಗಡೆ ಮಾಡುವುದಾಗಿಸಿರಿಗನ್ನಡ ಕೂಟ ಘೋಷಣೆ ಮಾಡಿತು. ಈ ನಿಟ್ಟಿನಲ್ಲಿ ಆಸಕ್ತರುಬರವಣಿಗೆಯನ್ನು ಶುರುಮಾಡಿ ನಿಗದಿತ ಸಮಯಕ್ಕೆ ಸ್ವರಚಿತ ಕತೆ ಮತ್ತು ಕವನಗಳನ್ನು ಹಂಚಿಕೊಳ್ಳಬೇಕಾಗಿ ಕಾರ್ತಿಕ್‌ ಮಂಜುನಾಥ್‌,ಅರವಿಂದ ಸುಬ್ರಮಣ್ಯ ಹಾಗೂಕಮಲಾಕ್ಷ ಎಚ್.ಎ ಮನವಿ ಮಾಡಿದರು.

ವರದಿ: ಕಮಲಾಕ್ಷ ಎಚ್.ಎ
ಸಿರಿಗನ್ನಡಕೂಟ, ಮ್ಯೂನಿಕ್, ಜರ್ಮನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.