ADVERTISEMENT

ಕರ್ತಾರ್‌ಪುರ: ಪಾಸ್‌ಪೋರ್ಟ್‌ ಮುಕ್ತ ಪ್ರವೇಶ?

ಪಿಟಿಐ
Published 8 ಫೆಬ್ರುವರಿ 2020, 18:02 IST
Last Updated 8 ಫೆಬ್ರುವರಿ 2020, 18:02 IST

ಇಸ್ಲಾಮಾಬಾದ್‌:ಭಾರತೀಯ ಯಾತ್ರಾರ್ಥಿಗಳು ಪಾಸ್‌ಪೋರ್ಟ್‌ ಇಲ್ಲದೇ ಕರ್ತಾರ್‌ಪುರ ಕಾರಿಡಾರ್‌ ಪ್ರವೇಶಿಸಲು ಅವಕಾಶ ಕಲ್ಪಿ
ಸುವಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಜಾಜ್ ಶಾ ತಿಳಿಸಿದ್ದಾರೆ.

ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲು ಚಿಂತಿಸಲಾಗಿದೆ ಎಂದು ಸಂಸತ್‌ ಅಧಿವೇಶನದಲ್ಲಿ ಅವರು ಹೇಳಿದ್ದಾರೆ.

ಪಂಜಾಬ್‌ನ ಡೇರಾ ಬಾಬಾ ನಾನಕ್‌ ಸ್ಮಾರಕ ಮತ್ತು ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್‌ ಸಾಹಿಬ್‌ ನಡುವೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್ ನವೆಂಬರ್‌ನಲ್ಲಿ ಉದ್ಘಾಟನೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.