ADVERTISEMENT

ಕುವೈತ್‌ನಲ್ಲಿ ಎರಡು ವರ್ಷಗಳಲ್ಲಿ ನಾಲ್ಕನೇ ಸರ್ಕಾರ ರಚನೆ

ಐಎಎನ್ಎಸ್
Published 29 ಡಿಸೆಂಬರ್ 2021, 12:37 IST
Last Updated 29 ಡಿಸೆಂಬರ್ 2021, 12:37 IST
ಶೇಖ್ ಸಬಾ ಅಲ್-ಖಲೀದ್ ಅಲ್ ಸಬಾ
ಶೇಖ್ ಸಬಾ ಅಲ್-ಖಲೀದ್ ಅಲ್ ಸಬಾ   

ಕುವೈತ್ ಸಿಟಿ: ಕುವೈತ್‌ನಲ್ಲಿ ಹೊಸ ಸರ್ಕಾರವು ಬುಧವಾರ ರಚನೆಯಾಗಿದ್ದು, ಅಧಿಕಾರ ವಹಿಸಿಕೊಂಡಿದೆ.

ಈ ಮೂಲಕ ತೈಲ ಸಮೃದ್ಧ ಗಲ್ಫ್ ಎಮಿರೇಟ್ಸ್‌ ರಾಷ್ಟ್ರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಉಂಟಾಗಿರುವ ರಾಜಕೀಯ ಅನಿಶ್ಚಿತತೆಯ ನಡುವೆ ನಾಲ್ಕನೇ ಸರ್ಕಾರ ಅಧಿಕಾರ ವಹಿಸಿದೆ.

ದಶಕದಿಂದಲೂ ಅಧಿಕಾರದಲ್ಲಿದ್ದ ಅಲ್-ಸಬಾ ಕುಟುಂಬ ಪ್ರಾಬಲ್ಯದ ಚುನಾಯಿತ ಶಾಸಕರು ಹಾಗೂ ಸತತವಾದ ಸರ್ಕಾರಗಳ ನಡುವಣ ವಿವಾದಗಳಿಂದ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಇದರಿಂದಾಗಿ ಸಂಸತ್ ಹಾಗೂ ಸಂಪುಟವನ್ನು ಹಲವು ಬಾರಿ ವಿಸರ್ಜಿಸಲಾಗಿದೆ.

ADVERTISEMENT

ನವೆಂಬರ್ ತಿಂಗಳಲ್ಲಿ ಕೊನೆಯದಾಗಿ ಸರ್ಕಾರವು ವಿಸರ್ಜಿಸಲ್ಪಟ್ಟಿತ್ತು. ಈಗ 2019ರಲ್ಲಿ ಪ್ರಧಾನ ಮಂತ್ರಿಯಾದ ಬಳಿಕ ಶೇಖ್ಸಬಾ ಅಲ್-ಖಲೀದ್ ಅಲ್ ಸಬಾ ಅವರು ರಚಿಸಿರುವ ನಾಲ್ಕನೇ ಸರ್ಕಾರವಾಗಿದೆ.

ಕುವೈತ್, ಸಂಪೂರ್ಣ ಚುನಾಯಿತ ಸಂಸತ್ ಅನ್ನು ಹೊಂದಿರುವ ಏಕೈಕ ಗಲ್ಫ್ ಅರಬ್ ರಾಷ್ಟ್ರವಾಗಿದೆ.

ಸಂಪುಟ ಪುನರ್‌ ರಚನೆಯಲ್ಲಿ ತೈಲ ಸಚಿವ ಮೊಹಮ್ಮದ್ ಅಲ್-ಫೇರ್ಸ್ ಮತ್ತು ವಿದೇಶಾಂಗ ಸಚಿವ ಶೇಖ್ ಅಹ್ಮದ್ ನಾಸರ್ ಅಲ್-ಮೊಹಮ್ಮದ್ ಅಲ್-ಸಬಾ ತಮ್ಮ ಹುದ್ದೆಗಳನ್ನು ಉಳಿಸಿಕೊಂಡಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ತೈಲ ಬೆಲೆ ಕುಸಿತದಿಂದಾಗಿ ಹೆಚ್ಚಿನ ಗಲ್ಫ್ ರಾಷ್ಟ್ರಗಳಂತೆ ಕುವೈತ್‌ನ ಆರ್ಥಿಕತೆಯು ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.