ADVERTISEMENT

ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನೇಮಕಗೊಂಡಿರುವ ಎರಿಕ್‌ಗೆ ಕೋವಿಡ್‌ ದೃಢ

ಪಿಟಿಐ
Published 4 ನವೆಂಬರ್ 2021, 6:45 IST
Last Updated 4 ನವೆಂಬರ್ 2021, 6:45 IST
ಎರಿಕ್‌ ಗಾರ್ಸೆಟ್ಟಿ
ಎರಿಕ್‌ ಗಾರ್ಸೆಟ್ಟಿ   

ಗ್ಲೋಸ್ಗೋ: ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನೇಮಕಗೊಂಡಿರುವ, ಲಾಸ್‌ ಏಂಜಲೀಸ್‌ನ ಮೇಯರ್ ಎರಿಕ್‌ ಗಾರ್ಸೆಟ್ಟಿ ಅವರಿಗೆ ಕೋವಿಡ್‌–19 ದೃಢಪಟ್ಟಿದೆ.

ಇಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ ಅವರು ಪಾಲ್ಗೊಂಡಿದ್ದರು.

‘ಎರಿಕ್‌ ಗಾರ್ಸೆಟ್ಟಿ ಅವರಿಗೆ ಬುಧವಾರ ಕೋವಿಡ್‌–19 ದೃಢಪಟ್ಟಿದೆ.ತಾವು ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಅವರು ಐಸೊಲೇಟ್‌ ಆಗಿದ್ದು, ಆರೋಗ್ಯ ಸ್ಥಿರವಾಗಿದೆ. ಅವರು ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆದಿದ್ದಾರೆ’ ಎಂದು ಅವರ ಕಚೇರಿ ಟ್ವೀಟ್‌ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.