ADVERTISEMENT

ಫಿಲಿಪ್ಪೀನ್ಸ್‌: ನಿರಂತರ ಮಳೆಯಿಂದಾಗಿ ಮಣ್ಣು ಕುಸಿದು 7 ಮಂದಿ ಸಾವು

ಪಿಟಿಐ
Published 18 ಜನವರಿ 2024, 12:42 IST
Last Updated 18 ಜನವರಿ 2024, 12:42 IST
<div class="paragraphs"><p>ಸಾವು (ಪ್ರಾತಿನಿಧಿಕ ಚಿತ್ರ)</p></div>

ಸಾವು (ಪ್ರಾತಿನಿಧಿಕ ಚಿತ್ರ)

   

ಮನಿಲಾ : ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆಯೊಂದರ ಮೇಲೆ ಮಣ್ಣು ಕುಸಿದು ಐವರು ಮಕ್ಕಳು ಸೇರಿದಂತೆ 7 ಮಂದಿ ಮೃತಪಟ್ಟಿದ್ದು, 10 ಮಂದಿ ಕಣ್ಮರೆಯಾಗಿರುವ ದುರ್ಘಟನೆ ದಕ್ಷಿಣ ಡಾವೋ ದೆ ಒರೋ ಪ್ರಾಂತ್ಯದಲ್ಲಿ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, 10 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಡಾವೋ ಪ್ರಾಂತ್ಯದ ನಾಗರಿಕ ರಕ್ಷಣಾ ವಿಭಾಗದ ನಿರ್ದೇಶಕ ಎಡ್ನಾರ್ ದಯಾಂಘಿರಂಗ್ ತಿಳಿಸಿದ್ದಾರೆ.     

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.