ADVERTISEMENT

ಬ್ರೆಜಿಲ್‌: ಭಾರಿ ಮಳೆ, ಭೂಕುಸಿತದಲ್ಲಿ 31 ಮಂದಿ ಸಾವು

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತ

ಏಜೆನ್ಸೀಸ್
Published 29 ಮೇ 2022, 10:23 IST
Last Updated 29 ಮೇ 2022, 10:23 IST
ಪ್ರವಾಹಪೀಡಿತ ರೆಸಿಫೆ ಪ್ರದೇಶದಿಂದ ಜನರ ರಕ್ಷಣಾ ಕಾರ್ಯಾಚರಣೆ –ಎಎಫ್‌ಪಿ
ಪ್ರವಾಹಪೀಡಿತ ರೆಸಿಫೆ ಪ್ರದೇಶದಿಂದ ಜನರ ರಕ್ಷಣಾ ಕಾರ್ಯಾಚರಣೆ –ಎಎಫ್‌ಪಿ   

ಬ್ರಸಿಲಿಯಾ:ಈಶಾನ್ಯ ಬ್ರೆಜಿಲ್‌ನ ಪೆರ್ನಂಬುಕೊ ರಾಜ್ಯದಲ್ಲಿ ಶನಿವಾರ ಸುರಿದ ಭಾರಿ ಮಳೆಯ ಪರಿಣಾಮ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 29 ಮಂದಿ ಮೃತಪಟ್ಟಿದ್ದಾರೆ.ಅಲಗೊಸ್‌ ರಾಜ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಬ್ರೆಜಿಲ್‌ನಲ್ಲಿ ಮಳೆಯಾಗುತ್ತಿದ್ದು,ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಪೆರ್ನಂಬುಕೊದಲ್ಲಿ 1000ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರೆಸಿಫೆ ನಗರದಲ್ಲಿ ಶಾಲೆಗಳನ್ನು ತೆರೆದು ನಿರಾಶ್ರಿತರಿಗೆ ಆಶ್ರಯ ನೀಡಲಾಗುತ್ತಿದೆ ಎಂದು ನಾಗರಿಕ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT