ಕೊಲೊಂಬೊ: ಈಸ್ಟರ್ ದಿನದಂದು ನಡೆದ ಸ್ಫೋಟದ ಸಂಚುಕೋರ ಎನ್ನಲಾದ ನ್ಯಾಷನಲ್ ಥೌವೀತ್ ಜಮಾತ್‌ನ (ಎನ್‌ಟಿಜೆ) ನಾಯಕ ಮೃತ ಮೊಹಮ್ಮದ್ ಕಾಸಿಂ ಝಹ್ರಾನ್‌ನ ಡಿಎನ್‌ಎ ಪರೀಕ್ಷೆಯನ್ನು ಮೇ 15ರ ಒಳಗೆ ನಡೆಸುವಂತೆ ಶ್ರೀಲಂಕಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಪರೀಕ್ಷೆಗೆಝಹ್ರಾನ್‌ನ ಸೋದರಿಯ ಡಿಎನ್‌ಎ ಮಾದರಿ ಬಳಸಿಕೊಳ್ಳಬಹುದು ಎಂದು ನ್ಯಾಯಾಲಯವು ಆದೇಶಿಸಿದೆ.
ಜೊತೆಗೆ ಸ್ಫೋಟದ ಎರಡನೇ ದಾಳಿಕೋರ ಇಬ್ರಾಹಿಂನ ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದೂ ನ್ಯಾಯಾಲಯ ಹೇಳಿದೆ. ಸ್ಫೋಟಕ್ಕೆ ಬಳಸಲಾದ ವಾಹನಗಳ ಕುರಿತು ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.