ADVERTISEMENT

ಅಮೆರಿಕದ ಪ್ರಗತಿಗೆ ಭಾರತೀಯರ ಕೊಡುಗೆ ರುಜುವಾತು: ರಾಜಾ ಕೃಷ್ಣಮೂರ್ತಿ

ಜನಗಣತಿಯ ಅಂಕಿ–ಅಂಶ ಉಲ್ಲೇಖಿಸಿ ಸಂಸದ ರಾಜಾ ಕೃಷ್ಣಮೂರ್ತಿ ಅಭಿಮತ

ಪಿಟಿಐ
Published 3 ಸೆಪ್ಟೆಂಬರ್ 2021, 6:22 IST
Last Updated 3 ಸೆಪ್ಟೆಂಬರ್ 2021, 6:22 IST
ರಾಜಾ ಕೃಷ್ಣಮೂರ್ತಿ
ರಾಜಾ ಕೃಷ್ಣಮೂರ್ತಿ   

ವಾಷಿಂಗ್ಟನ್: ‘ಸಾಂಸ್ಕೃತಿಕ, ಆರ್ಥಿಕ ಸೇರಿದಂತೆಅಮೆರಿಕದ ವಿವಿಧ ಕ್ಷೇತ್ರಗಳ ಉನ್ನತಿಗೆ ಭಾರತೀಯ ಅಮೆರಿಕನ್ನರು ಮಹತ್ವದ ಕೊಡುಗೆ ನೀಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾಗಿರುವ ಜನಗಣತಿ ವಿವರಗಳು ಈ ಮಾತುಗಳನ್ನು ರುಜುವಾತುಪಡಿಸುತ್ತವೆ’ ಎಂದು ಸಂಸದ ರಾಜಾ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಅಮೆರಿಕದ ಪ್ರಗತಿಗೆ ಭಾರತೀಯರ ಕೊಡುಗೆ ಕುರಿತು ವಿವರಿಸಿದ್ದಾರೆ.

‘ಜನಗಣತಿಯ ಪ್ರಕಾರ ಅಮೆರಿಕದಲ್ಲಿ 40 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರ ಸಂಖ್ಯೆ ಶೇ 1.3ರಷ್ಟು. ವೃತ್ತಿ ಹಾಗೂ ಆರ್ಥಿಕ ಸ್ವಾವಲಂಬನೆ ವಿಷಯಕ್ಕೆ ಬಂದಾಗ ಭಾರತೀಯರು ಗಮನಾರ್ಹ ಯಶಸ್ಸು ಗಳಿಸಿದ್ದಾರೆ. ಅಮೆರಿಕದ ಅಭಿವೃದ್ಧಿಗೆ ಇತರ ದೇಶಗಳ ಪ್ರಜೆಗಳಿಗಿಂತ ಭಾರತೀಯರ ಕೊಡುಗೆ ಕಡಿಮೆಯೇನಿಲ್ಲ’ ಎಂದು ಹೇಳಿದರು.

ADVERTISEMENT

‘ಶೇ 80ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ಪದವೀಧರರಾಗಿದ್ದಾರೆ. ಇತರ ಯಾವುದೇ ದೇಶದ ಪ್ರಜೆಗಳಿಗೆ ಹೋಲಿಸಿದರೆ ಭಾರತೀಯರ ತಲಾ ಆದಾಯವೂ ಅಧಿಕ. ಕಂಪ್ಯೂಟರ್‌ ವಿಜ್ಞಾನ, ಹಣಕಾಸು, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭಾರತೀಯರು ತಮ್ಮ ಛಾಪು ಮೂಡಿಸಿದ್ದಾರೆ. ಅಮೆರಿಕದಲ್ಲಿರುವ ವೈದ್ಯರ ಪೈಕಿ ಭಾರತೀಯರ ಸಂಖ್ಯೆ ಶೇ 10ರಷ್ಟಿದೆ’ ಎಂದೂ ರಾಜಾ ಕೃಷ್ಣಮೂರ್ತಿ ಹೇಳಿದರು.

‘ಹಲವಾರು ಕ್ಷೇತ್ರಗಳಲ್ಲಿ ಭಾರತೀಯರು ಸಾಧನೆ ಮಾಡಿದ್ದಾರೆ. ಅದೇ ರೀತಿ ರಾಜಕೀಯ ಕ್ಷೇತ್ರವನ್ನು ಹೆಚ್ಚು ಜನರು ಪ್ರವೇಶಿಸಬೇಕು ಎಂಬುದು ನನ್ನ ಅಪೇಕ್ಷೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.