ADVERTISEMENT

ಫ್ರಾನ್ಸ್: ತೆರಿಗೆ ವಿನಾಯಿತಿ ಭರವಸೆ ನೀಡಿದ ಮ್ಯಾಕ್ರನ್

ಜನರ ಆಕ್ರೋಶಕ್ಕೆ ಹೊಣೆ ಹೊತ್ತ ಅಧ್ಯಕ್ಷ

ಏಜೆನ್ಸೀಸ್
Published 11 ಡಿಸೆಂಬರ್ 2018, 18:40 IST
Last Updated 11 ಡಿಸೆಂಬರ್ 2018, 18:40 IST
ಟಿವಿಯಲ್ಲಿ ಪ್ರಸಾರವಾದ ಎಮಾನ್ಯುಯಲ್ ಮ್ಯಾಕ್ರೊನ್ ಅವರ ಸಂದೇಶವನ್ನು ಪ್ರತಿಭಟನಕಾರರು ವೀಕ್ಷಿಸಿದರು –ರಾಯಿಟರ್ಸ್ ಚಿತ್ರProtesters wearing yellow vests watch French President Emmanuel Macron on a TV screen at the motorway toll booth in La Ciotat, near Marseille, France, December 10, 2018. REUTERS/Jean-Paul Pelissier

ಪ್ಯಾರಿಸ್: ಇಡೀ ಫ್ರಾನ್ಸ್‌ ಅನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿರುವ ಪ್ರತಿಭಟನೆ ಕುರಿತು ಮಂಗಳವಾರ ಮೌನ ಮುರಿದಿರುವ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್, ಕಾರ್ಮಿಕರು ಹಾಗೂ ಪಿಂಚಣಿದಾರರಿಗೆ ತೆರಿಗೆ ವಿನಾಯಿತಿ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಜನರ ಆಕ್ರೋಶ ಕುರಿತು ಪ್ರತಿಕ್ರಿಯಿಸಿರುವ ಅವರು ‘ನಾನು ಹೊಣೆ ಹೊರುತ್ತೇನೆ. ನನ್ನ ಮಾತುಗಳಿಂದ ಜನರಿಗೆ ನೋವುಂಟಾಗಿರಬಹುದು’ ಎಂದುಟಿ.ವಿ ಸಂದೇಶದಲ್ಲಿ ಹೇಳಿದ್ದಾರೆ.

ಮುಂದಿನ ವರ್ಷಾರಂಭದಿಂದ ಕಾರ್ಮಿಕರ ಕನಿಷ್ಠ ವೇತನದಲ್ಲಿ 100 ಯುರೊ ಹೆಚ್ಚಳ, ಹೆಚ್ಚುವರಿ ಕಾರ್ಯಾವಧಿ ನಿರ್ವಹಿಸಿದ್ದಕ್ಕೆ ನೀಡುವ ವೇತನದ ಮೇಲಿನ ತೆರಿಗೆ ರದ್ದುಗೊಳಿಸುವುದು, ಲಾಭದಲ್ಲಿರುವ ಕಂಪನಿಗಳು ಉದ್ಯೋಗಿಗಳಿಗೆ ತೆರಿಗೆ ರಹಿತ ವರ್ಷಾಂತ್ಯದ ಬೋನಸ್ ನೀಡುವುದು ಸೇರಿದಂತೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿ ಅವರು ಪ್ರತಿಭಟನಾಕಾರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಅಲ್ಲದೆ, ಸಣ್ಣ ಮೊತ್ತದ ಪಿಂಚಣಿ ಮೇಲೆ ತೆರಿಗೆ ಹೆಚ್ಚಳ ಮಾಡಿದ ಕ್ರಮ ‘ಅನ್ಯಾಯ’ ಎನ್ನುವುದನ್ನು ಒಪ್ಪಿಕೊಂಡಿರುವ ಅವರು, ಇದನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.

ADVERTISEMENT

‘ಆರ್ಥಿಕ ಮತ್ತು ಸಾಮಾಜಿಕ ತುರ್ತು ಪರಿಸ್ಥಿತಿ’ ಘೋಷಿಸಿದ್ದ ಮ್ಯಾಕ್ರನ್, ಸರ್ಕಾರ ಮತ್ತು ಸಂಸತ್ತು ತೆರಿಗೆ ನಿಯಮ ಬದಲಾವಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನವೆಂಬರ್‌ನಲ್ಲಿ ಆದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.