ADVERTISEMENT

ಮಲೇಷ್ಯಾ: ಜನವರಿ 1ರ ವೇಳೆಗೆ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಬಂಧ ತೆರವು ಸಂಭವ

ರಾಯಿಟರ್ಸ್
Published 11 ನವೆಂಬರ್ 2021, 8:55 IST
Last Updated 11 ನವೆಂಬರ್ 2021, 8:55 IST
ಮಲೇಷಿಯದ ಸ್ಕೈ ಬ್ರಿಡ್ಜ್‌ ವೀಕ್ಷಣೆಯನ್ನು ದೇಶಿ ಪ್ರವಾಸಿಗರಿಗಾಗಿ ಈಚೆಗೆ ಮುಕ್ತಗೊಳಿಸಲಾಗಿದೆ
ಮಲೇಷಿಯದ ಸ್ಕೈ ಬ್ರಿಡ್ಜ್‌ ವೀಕ್ಷಣೆಯನ್ನು ದೇಶಿ ಪ್ರವಾಸಿಗರಿಗಾಗಿ ಈಚೆಗೆ ಮುಕ್ತಗೊಳಿಸಲಾಗಿದೆ   

ಕ್ವಾಲಾಲಂಪುರ: ಅಂತರರಾಷ್ಟ್ರೀಯ ಪ್ರವಾಸಿಗರ ಮೇಲೆ ವಿಧಿಸಿರುವ ನಿರ್ಬಂಧವನ್ನು ಮಲೇಷ್ಯಾ ಸರ್ಕಾರ ಜನವರಿ 1ರ ವೇಳೆಗೆ ಬಹುತೇಕ ತೆರವುಗೊಳಿಸುವ ಸಂಭವವಿದೆ.

ಕೋವಿಡ್ ಪರಿಸ್ಥಿತಿ ಸುಧಾರಣೆಯ ಹಿಂದೆಯೇ ಪ್ರವಾಸೋದ್ಯಮ ಕ್ಷೇತ್ರಕ್ಕೆ ಚೇತರಿಕೆ ನೀಡಲು ಮಲೇಷ್ಯಾ ನಿರ್ಧರಿಸಿದೆ. ಲಸಿಕೆ ಅಭಿಯಾನ ಚುರುಕುಗೊಂಡ ಬಳಿಕ ಇತ್ತೀಚಿನ ವಾರಗಳಲ್ಲಿ ಕೋವಿಡ್ ಪ್ರಕರಣಗಳ ಪ್ರಮಾಣವು ಗಣನೀಯವಾಗಿ ತಗ್ಗಿದೆ.

ಮಲೇಷ್ಯಾದ ಜನಸಂಖ್ಯೆ ಸುಮಾರು 3.2 ಕೋಟಿ ಇದ್ದು, ಸರ್ಕಾರದ ಅಂಕಿ ಅಂಶಗಳ ಪ್ರಕಾರ ಮೂರನೇ ಒಂದರಷ್ಟು ಜನರಿಗೆ ಲಸಿಕೆ ನೀಡಲಾಗಿದೆ.

ADVERTISEMENT

ಸಲಹಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಪ್ರಧಾನಿ ಮುಯಿದ್ದೀನ್‌ ಯಾಸಿನ್‌ ಅವರು, ವಿದೇಶಿ ಪ್ರವಾಸಿಗರ ಕೊರತೆಯಿಂದಾಗಿ ಪ್ರವಾಸೋದ್ಯಮದ ಚೇತರಿಕೆ ನಿಧಾನಗತಿಯಲ್ಲಿದೆ. ಸಹಜ ಸ್ಥಿತಿಗೆ ಮರಳಲು ಇನ್ನಷ್ಟು ಕಾಲಾವಕಾಶ ಬೇಕಾಗಬಹುದು ಎಂದು ಹೇಳಿದರು.

ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಮುಕ್ತ ಪ್ರವೇಶ ಕಲ್ಪಿಸಲು ಇನ್ನೂ ನಿರ್ದಿಷ್ಟ ದಿನಾಂಕ ನಿಗದಿಪಡಿಸಿಲ್ಲ. ಆರೋಗ್ಯ ಮತ್ತು ಭದ್ರತೆಗೆ ಸಂಬಂಧಿಸಿದ ಇಲಾಖೆಗಳು ಇದನ್ನು ಅಂತಿಮಗೊಳಿಸಲಿವೆ ಎಂದು ತಿಳಿಸಿದರು.

ಕೋವಿಡ್‌ ಸೋಂಕು ತಡೆಗೆ ಪರೀಕ್ಷೆ ನಡೆಸುವುದು ಹಾಗೂ ಇತರೆ ನಿರ್ಬಂಧ ಕ್ರಮಗಳು ಎಂದಿನಂತೆ ಇರಲಿವೆ. ವಿವಿಧ ದೇಶಗಳಲ್ಲಿನ ಕೋವಿಡ್ ಸ್ಥಿತಿಯನ್ನು ಆಧರಿಸಿ ಅಲ್ಲಿನ ಪ್ರಯಾಣಿಕರಿಗೆ ಪ್ರವೇಶ ಅವಕಾಶವನ್ನು ಕಲ್ಪಿಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.