ADVERTISEMENT

ಕಮಲಾ ಹ್ಯಾರಿಸ್‌ ಅಧಿಕೃತ ನಿವಾಸದ ಬಳಿ ವ್ಯಕ್ತಿ ಸೆರೆ: ಬಂದೂಕು, ಮದ್ದುಗುಂಡು ವಶ

ಪಿಟಿಐ
Published 18 ಮಾರ್ಚ್ 2021, 16:17 IST
Last Updated 18 ಮಾರ್ಚ್ 2021, 16:17 IST

ವಾಷಿಂಗ್ಟನ್‌: ಬಂದೂಕು ಹಾಗೂ ಮದ್ದುಗುಂಡುಗಳನ್ನು ಹೊಂದಿದ್ದ ಆರೋಪದಲ್ಲಿ ಯುವಕನೊಬ್ಬನನ್ನು, ಅಮೆರಿಕ ಉಪಾಧ್ಯಕ್ಷೆ ಕಮಲ ಹ್ಯಾರಿಸ್‌ ಅವರ ಅಧಿಕೃತ ನಿವಾಸದ ಬಳಿ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಟೆಕ್ಸಾಸ್‌ನ ಸ್ಯಾನ್‌ ಆಂಟೋನಿಯಾ ನಿವಾಸಿ ಪೌಲ್‌ ಮುರ್ರೆ ಎಂಬಾತನನ್ನು ಬುಧವಾರ ಬಂಧಿಸಿದ್ದು, ಆತನ ವಾಹನದಿಂದ ರೈಫಲ್‌ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕೃತ ನಿವಾಸದ ನವೀಕರಣ ಕಾಮಗಾರಿಗಳು ನಡೆಯುತ್ತಿರುವ ಕಾರಣ, ಕಮಲಾ ಹ್ಯಾರಿಸ್‌ ಅವರು ಅಲ್ಲಿ ವಾಸಿಸುತ್ತಿಲ್ಲ. ಅವರು ಶ್ವೇತಭವನ ಬಳಿಯ ಬ್ಲೇರ್‌ ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಯು.ಎಸ್ ಕ್ಯಾಪಿಟಲ್‌ ಬಳಿ ಜನವರಿ 6ರಂದು ನಡೆದ ದಾಂದಲೆಯ ಬಳಿಕ ಉಪಾಧ್ಯಕ್ಷರ ಅಧಿಕೃತ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.