ADVERTISEMENT

8 ರಿಂದ10 ಅಡಿ ಎತ್ತರ, ದೊಡ್ಡ ಕಣ್ಣುಗಳು– ಹಿತ್ತಲಲ್ಲಿ ಏಲಿಯನ್‌ಗಳನ್ನು ಕಂಡೆ ಎಂದ ಯುವಕ!

ಅಮೆರಿಕದ ಲಾಸ್ ವೇಗಾಸ್‌ನಲ್ಲಿ ಘಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2023, 16:01 IST
Last Updated 9 ಜೂನ್ 2023, 16:01 IST
   

ಲಾಸ್ ವೇಗಾಸ್, ಅಮೆರಿಕ: ತನ್ನ ಮನೆಯ ಹಿತ್ತಲಿನಲ್ಲಿ ಏಲಿಯನ್‌ಗಳನ್ನು (ಅಂತರಿಕ್ಷ ಜೀವಿಗಳು ಎನ್ನಲಾದ) ನೋಡಿರುವುದಾಗಿ ಯುವಕನೊಬ್ಬ ಅಮೆರಿಕದ ಲಾಸ್ ವೇಗಾಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಲಾಸ್ ವೇಗಾಸ್ ಪೊಲೀಸರೊಬ್ಬರ ಬಾಡಿ ಕ್ಯಾಮ್‌ನಲ್ಲಿ ಯುಎಫ್‌ಒ ಒಂದು ಹಾರಿಹೋಗುವ (Unidentified flying object) ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

’ಆ ವಿಡಿಯೊ ಮುದ್ರಿತವಾದ ದಿನ ತನ್ನ ಮನೆಯ ಹಿತ್ತಲಿನಲ್ಲಿ 8 ರಿಂದ 10 ಅಡಿ ಎತ್ತರದ ದೊಡ್ಡ ಕಣ್ಣು, ಕೈ ಕಾಲು ಹೊಂದಿದ್ದ ಎರಡು ಜೀವಿಗಳು ನಿಂತಿದ್ದನ್ನು ನಾನು ನೋಡಿದೆ. ಅವು ಏಲಿಯನ್ ರೀತಿ ಕಂಡವು. ಕೂಡಲೇ ಗಾಢಬೆಳಕಿನೊಂದಿಗೆ ಹಾರಿ ಹೋದವು’ ಎಂದು ಪೊಲೀಸರ ಎದುರು ಮಾಹಿತಿ ನೀಡಿದ್ದಾನೆ.

ಏಪ್ರಿಲ್ 30 ರಂದು ಆ ವಿಡಿಯೊ ಮುದ್ರಿತವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯನ್ನು ಹಂಚಿಕೊಂಡ ವ್ಯಕ್ತಿಯ ಹೆಸರು, ವಿಳಾಸವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ‘ಮಿರರ್’ ವೆಬ್‌ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.