ನವದೆಹಲಿ: ನವದೆಹಲಿಯಿಂದ ನ್ಯೂಯಾರ್ಕ್‌ವರೆಗೆ ವಿವಿಧ ದೇಶಗಳ ರಾಜಧಾನಿಗಳಲ್ಲಿ ಇರುವ ಅಫ್ಗಾನಿಸ್ತಾನದ ರಾಯಭಾರ ಕಚೇರಿಯ ರಾಜತಾಂತ್ರಿಕರು ತಾಲಿಬಾನ್ ನೇತೃತ್ವದ ಸರ್ಕಾರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಅಫ್ಗಾನಿಸ್ತಾನ ರಾಯಭಾರ ಕಚೇರಿಯಲ್ಲಿ ಇಸ್ಲಾಮಿಕ್
ರಿಪಬ್ಲಿಕ್ ಆಫ್ ಅಫ್ಗಾನಿಸ್ತಾನದ ತ್ರಿವರ್ಣ (ಕೆಂಪು–ಹಸಿರು–ಕಪ್ಪು) ಧ್ವಜವೇ ಬುಧವಾರವೂ
ಹಾರಾಡುತ್ತಿತ್ತು.
ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕಚೇರಿಯ ರಾಯಭಾರಿ, ವಾಷಿಂಗ್ಟನ್ ಮತ್ತು ಇತರ ದೇಶಗಳ ರಾಯಭಾರಿಗಳು ಕೂಡ ತಾಲಿಬಾನ್ ಸರ್ಕಾರವನ್ನು ಒಪ್ಪಿಕೊಂಡಿಲ್ಲ.
‘ತಾಲಿಬಾನ್ ನೇತೃತ್ವದ ಸರ್ಕಾರವನ್ನು ತಿರಸ್ಕರಿಸಿ’ ಎಂದು ವಿಶ್ವಸಂಸ್ಥೆಯಲ್ಲಿರುವ ಅಫ್ಗಾನಿಸ್ತಾನದ ರಾಯಭಾರಿ ಗುಲಾಂ ಇಸಕ್‌ಝೈ
ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.